Thursday, June 4, 2026
Homeಕರಾವಳಿಮಂಗಳೂರು:ಪಾವಂಜೆಯಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್:ಡಿಕ್ಕಿ ರಭಸಕ್ಕೆ ರಸ್ತೆಯಲ್ಲೇ ಪಲ್ಟಿಯಾದ ಲಾರಿ

ಮಂಗಳೂರು:ಪಾವಂಜೆಯಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್:ಡಿಕ್ಕಿ ರಭಸಕ್ಕೆ ರಸ್ತೆಯಲ್ಲೇ ಪಲ್ಟಿಯಾದ ಲಾರಿ

- Advertisement -
- Advertisement -

ಮಂಗಳೂರು: ಕಾಂಕ್ರಿಟ್  ಮಿಕ್ಸರ್ ಲಾರಿ ಮತ್ತು ಖಾಸಗಿ ಬಸ್ ಮಧ್ಯೆ ಅಪಘಾತ ಸಂಭವಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಗಾಯಗೊಂಡಿರುವ ಘಟನೆ ಪಾವಂಜೆಯಲ್ಲಿ ನಡೆದಿದೆ.

ಮಂಗಳೂರು ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಕಾಂಕ್ರೀಟ್ ಮಿಕ್ಸರ್ ಲಾರಿ ಪ್ರವೇಶಿಸಿ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ಅಪಘಾತ ನಡೆದಿದೆ.

ಲಾರಿ ತಿರುವು ಪಡೆದುಕೊಳ್ಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಲಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ  ಕಾಂಕ್ರೀಟ್ ಮಿಕ್ಸರ್ ಲಾರಿ ಪಲ್ಟಿಯಾಗಿದೆ. ಅಪಘಾತದಲ್ಲಿ ಖಾಸಗಿ ಬಸ್ ಚಾಲಕ ಮಂಜುನಾಥ್ ಮತ್ತು ನಿರ್ವಾಹಕ ಮನು ಎಂಬುವವರಿಗೆ ಗಾಯಗಳಾಗಿವೆ.

- Advertisement -

Latest News

error: Content is protected !!