Sunday, August 30, 2026
Homeಕರಾವಳಿಪುತ್ರನಿಗೆ ಕೊರೋನಾ ಪಾಸಿಟಿವ್: ಮಾಜಿ ಶಾಸಕ ಮೊಯ್ದೀನ್ ಬಾವಾ ಮನೆ ಸೀಲ್ ಡೌನ್..!

ಪುತ್ರನಿಗೆ ಕೊರೋನಾ ಪಾಸಿಟಿವ್: ಮಾಜಿ ಶಾಸಕ ಮೊಯ್ದೀನ್ ಬಾವಾ ಮನೆ ಸೀಲ್ ಡೌನ್..!

- Advertisement -
- Advertisement -

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ನ ಪ್ರಭಾವಿ ನಾಯಕ ಮೊಯ್ದಿನ್ ಬಾವಾ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಮೊಯ್ದಿನ್ ಬಾವ ಪುತ್ರನಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ಚೊಕ್ಕಬೆಟ್ಟು ಬಳಿ‌ ಇರುವ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಬೆಂಗಳೂರಿನ ಲ್ಯಾಬ್ ನಲ್ಲಿ ಟೆಸ್ಟ್ ವೇಳೆ ಬಾವಾ ಪುತ್ರನಿಗೆ ಕೊರೋನಾ ಇರುವುದು ದೃಢವಾಗಿದೆ. ಸದ್ಯ ಬೆಂಗಳೂರಿನ ಆಸ್ಪತ್ರೆಯಲ್ಲಿ ಬಾವಾ ಪುತ್ರನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕೆಲ ದಿನಗಳ ಹಿಂದೆ ಬಾವ ಪುತ್ರ ಮಂಗಳೂರಿನ ಮನೆಗೆ ಬಂದಿದ್ದ. ಇನ್ನು ಮೊಯ್ದೀನ್ ಬಾವಾ ಮತ್ತು ಅವರ ಪತ್ನಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಮನೆಯನ್ನು ಸೀಲ್ ಡೌನ್ ಮಾಡಿದೆ.

- Advertisement -

Latest News

error: Content is protected !!