Sunday, June 7, 2026
Homeತಾಜಾ ಸುದ್ದಿ16 ವರ್ಷದ ಬಾಲಕಿಗೆ 66 ವರ್ಷದ ವೃದ್ಧನಿಂದ ಲವ್ ಲೆಟರ್: ತಾತನ ಲೆಟರ್ ನೋಡಿ ಶಾಕ್...

16 ವರ್ಷದ ಬಾಲಕಿಗೆ 66 ವರ್ಷದ ವೃದ್ಧನಿಂದ ಲವ್ ಲೆಟರ್: ತಾತನ ಲೆಟರ್ ನೋಡಿ ಶಾಕ್ ಆದ ಬಾಲಕಿ

- Advertisement -
- Advertisement -

ಕೊಯಮತ್ತೂರು: 16 ವರ್ಷದ ಬಾಲಕಿಗೆ ಪ್ರಸ್ತಾಪಿಸಿ ಲವ್ ಲೆಟರ್ ನೀಡಿದ ಆರೋಪದ ಮೇಲೆ 66 ವರ್ಷದ ವೃದ್ದನನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. 66 ವರ್ಷದ ಮೊಹಮ್ಮದ್ ಬಹೀರ್ ಬಾಷಾ ಬಂಧಿತ ಆರೋಪಿ.

ಬಂಧಿತ ಮೊಹಮ್ಮದ್ ಬಹೀರ್ ಬಾಷಾ, ಈ ಪತ್ರವನ್ನು ಎರಡು ದಿನಗಳ ಹಿಂದೆ ತನ್ನ ಪಕ್ಕದ ಮನೆಯ ಆಪ್ರಾಪ್ತ ಬಾಲಕಿಗೆ ನೀಡಿದ್ದ ಎನ್ನಲಾಗಿದೆ.

ಅವಳಿಗೆ ಬರೆದ ಪತ್ರದಲ್ಲಿ, “ನಾನು ನಿನ್ನನ್ನು ಇಷ್ಟಪಡುತ್ತೇನೆ, ಓಕೆ ನಾ” ಅಂತ ಪೋಲಿಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ತಾತ ತನಗೆ ಕೊಟ್ಟ ಪ್ರೇಮಪತ್ರವನ್ನು ಆಪ್ರಾಪ್ತ ಬಾಲಕಿ ಆಶ್ಚರ್ಯದಿಂದ, ಹುಡುಗಿ ತನ್ನ ತಾಯಿಗೆ ತೋರಿಸಿದ್ದಾಳೆ. ಇದೇ ವೇಳೆ ತಾತನ ಮನೆಯವರಿಗೆ ಮಾಹಿತಿ ನೀಡಿ, ಇನ್ಮುಂದೆ ಹೀಗೆ ಆಗದಂತೆ ಎಚ್ಚರವಹಿಸುವಂತೆ ವಾರ್ನಿಂಗ್‌ ನೀಡಿದ್ದಾರೆ ಎನ್ನಲಾಗಿದೆ.

ಆದರೆ, ಬಾಷಾ ಮತ್ತೆ ಬಾಲಕಿಯ ಮೇಲಿನ ಪ್ರೀತಿಯನ್ನು ಮುಂದುವರಿಸಿದ್ದು, ಆಕೆಗೆ ಬೆದರಿಕೆ ಹಾಕಿದ್ದಾರೆ ಎಂದು ಅವರು ಹೇಳಿದ್ದಾರೆ. ಹುಡುಗಿ ಮನೆಯಿಂದ ಹೊರಬರಲು ಹೆದರುತ್ತಿದ್ದರಿಂದ, ಆಕೆಯ ಪೋಷಕರು ಮಹಿಳಾ ಪೊಲೀಸರಿಗೆ ದೂರು ನೀಡಿದ್ದರು. ಬಾಷಾ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.ಸದ್ಯ ಆತನನ್ನು ಬಂಧಿಸಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ದಾಖಲಿಸಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!