Wednesday, July 2, 2025
Homeಕರಾವಳಿಸೋಷಿಯಲ್ ಮೀಡಿಯಾ ಮುಸ್ಲಿಂರ ಭಾವನೆಗೆ ಧಕ್ಕೆ ತರುವ ರೀತಿ ಪೋಸ್ಟ್ ಹಾಕಿದ ಆರೋಪ; ಮುಸ್ಲಿಂ ಯುವಜನ...

ಸೋಷಿಯಲ್ ಮೀಡಿಯಾ ಮುಸ್ಲಿಂರ ಭಾವನೆಗೆ ಧಕ್ಕೆ ತರುವ ರೀತಿ ಪೋಸ್ಟ್ ಹಾಕಿದ ಆರೋಪ; ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷರಿಂದ ಡಿವೈಎಸ್ಪಿಗೆ ದೂರು

spot_img
- Advertisement -
- Advertisement -

ಪುತ್ತೂರು; ಸೋಷಿಯಲ್ ಮೀಡಿಯಾ ಮುಸ್ಲಿಂರ ಭಾವನೆಗೆ ಧಕ್ಕೆ ತರುವ ರೀತಿ ಪೋಸ್ಟ್ ಹಾಕಿದ ಆರೋಪದಡಿ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷರು  ಸುದೀಪ್ ಎಂಬಾತನ ವಿರುದ್ಧ ಡಿವೈಎಸ್ಪಿ ಗಾನಾ ಪಿ. ಕುಮಾರಿ ಅವರಿಗೆ ದೂರು ನೀಡಿದ್ದಾರೆ.

ಅರುಣ್ ಕುಮಾರ್ ಬ್ರಿಗೆಡ್ ಪಾಣಾಜೆ ಎಂಬ ವಾಟ್ಸಾಪ್ ಗ್ರೂಪ್ ರಚಿಸಿ ಅದರಲ್ಲಿ ಕಾರ್ಟೂನ್ ರಚಿಸಿ ಮುಸ್ಲಿಂ ಮಹಿಳೆಯರು‌ ನಮಾಝ್ ಗೆ ನೇತೃತ್ವ ನೀಡುವ ಹಾಗೂ ಮಹಿಳೆಯ ಹಿಂದೆ ಪುರುಷರು ಇರುವ ಹಾಗೇ ಅಶ್ಲೀಲ‌ ಭಂಗಿಯಲ್ಲಿ ಕಾರ್ಟೂನ್ ಚಿತ್ರ ರಚಿಸಿ ಇಸ್ಲಾಂ ಧರ್ಮಕ್ಕೆ ನಿಂದನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇದು ನಮ್ಮ ನಂಬಿಕೆಯಾಗಿದ್ದು,  ಕಾರ್ಟೂನ್ ನಿಂದ ನಮಗೆ‌ ನೋವುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದು ಸಮಾಜದಲ್ಲಿ ಕೋಮು ಭಾವನೆ ಕೆರಳಿ ಅಶಾಂತಿ ಉಂಟು ಮಾಡಲು ಯತ್ನಿಸಿದ ಕೃತ್ಯವಾಗಿದ್ದು,ಆರೋಪಿಯ ವಿರುದ್ದ ಕಠಿಣ ಕ್ರಮ ಕೈಗೊಂಡು ಸಾಮರಸ್ಯವನ್ನು ಕಾಪಾಡಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

- Advertisement -
spot_img

Latest News

error: Content is protected !!