Thursday, June 4, 2026
Homeಕರಾವಳಿ ಸುಬ್ರಮಣ್ಯ; ಭಾರೀ ಗಾಳಿ ಮಳೆಗೆ ರಸ್ತೆಗುರುಳಿದ ಮರಗಳು; ಕಡಬ – ಸುಬ್ರಹ್ಮಣ್ಯ ರಸ್ತೆ ಸಂಚಾರ ಸಂಪೂರ್ಣ...

 ಸುಬ್ರಮಣ್ಯ; ಭಾರೀ ಗಾಳಿ ಮಳೆಗೆ ರಸ್ತೆಗುರುಳಿದ ಮರಗಳು; ಕಡಬ – ಸುಬ್ರಹ್ಮಣ್ಯ ರಸ್ತೆ ಸಂಚಾರ ಸಂಪೂರ್ಣ ಬಂದ್

- Advertisement -
- Advertisement -

ಸುಬ್ರಮಣ್ಯ: ಇಂದು ಸಂಜೆ ವೇಳೆಗೆ ಸುರಿದ ಭಾರೀ ಗಾಳಿ ಮಳೆಗೆ  ಮರಗಳು ಧರೆಗೆ ಉರುಳಿದ್ದು ಕಡಬ – ಸುಬ್ರಹ್ಮಣ್ಯ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ.

ನೆಟ್ಟಣ, ಬಿಳಿನೆಲೆ, ಕೈಕಂಬ ಪ್ರದೇಶಗಳಲ್ಲಿ ರಸ್ತೆಗೆ ಮರಗಳು ಉರುಳಿದ ಪರಿಣಾಮ ರಸ್ತೆ ಸಂಪರ್ಕ ಬಂದ್ ಆಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳ ತಂಡ ಕಾರ್ಯಾಚರಣೆ ನಡೆಸುತ್ತಿದೆ.

ಇನ್ನು ಮರ್ಧಾಳದಲ್ಲಿ ಪ್ರವಾಸಿಗರ ಟಿಟಿ ವಾಹನವೊಂದರ ಮೇಲೆ ಮರ ಬಿದ್ದ ಪರಿಣಾಮ ಪ್ರಯಾಣಿಕರು ಜಖಂಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

- Advertisement -

Latest News

error: Content is protected !!