Tuesday, June 9, 2026
Homeಅಪರಾಧಮಂಗಳೂರು; ಅಪರಿಚಿತನಿಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ಆರೋಪ

ಮಂಗಳೂರು; ಅಪರಿಚಿತನಿಂದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಹಲ್ಲೆ ಆರೋಪ

- Advertisement -
- Advertisement -

ಮಂಗಳೂರು; ಅಪರಿಚಿತ ಯುವಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿದ ಘಟನೆ  ಉಳ್ಳಾಲ ಠಾಣೆ ವ್ಯಾಪ್ತಿಯ ಭಗವತೀ ದೇವಸ್ಥಾನ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ. ಈ ಬಗ್ಗೆ  ಯುವತಿ ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಸಂತ್ರಸ್ತೆ ‌ಯುವತಿ ‌ಬಸ್ತಿಪಡ್ಪಿವಿನ ತನ್ನ ನಿವಾಸದಿಂದ ಭಗವತಿ ದೇವಸ್ಥಾನದ ಒಳರಸ್ತೆಯಾಗಿ ನಡೆದು ಕೊಂಡು ಹೋಗುತ್ತಿದ್ದಾಗ ಕಬ್ಬಿಣದ ಕಪಾಟು ತಯಾರು ಮಾಡುವ ಅಂಗಡಿ ಬಳಿ ನಿಂತಿದ್ದ ಅಪರಿಚಿತ ಯುವಕ ಈಕೆಗೆ  ಲೈಂಗಿಕ ಕಿರುಕುಳ ನೀಡಿ, ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಸಂತ್ರಸ್ತೆ ‌ಯುವತಿ ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!