Saturday, June 6, 2026
Homeಕರಾವಳಿಉಡುಪಿಉಡುಪಿ: ಆನ್ಲೈನ್ ನಲ್ಲಿ ಸ್ಕೂಟರ್ ಖರೀದಿಸಲು ಹೋಗಿ ಸಾವಿರಾರು ರೂಪಾಯಿ ಕಳೆದುಕೊಂಡ ವ್ಯಕ್ತಿ

ಉಡುಪಿ: ಆನ್ಲೈನ್ ನಲ್ಲಿ ಸ್ಕೂಟರ್ ಖರೀದಿಸಲು ಹೋಗಿ ಸಾವಿರಾರು ರೂಪಾಯಿ ಕಳೆದುಕೊಂಡ ವ್ಯಕ್ತಿ

- Advertisement -
- Advertisement -

ಉಡುಪಿ: ಆನ್ಲೈನ್ ನಲ್ಲಿ ಸ್ಕೂಟರ್ ಖರೀದಿಸಲು ಹೋಗಿ  ವ್ಯಕ್ತಿ ಸಾವಿರಾರು ರೂಪಾಯಿ ಕಳೆದುಕೊಂಡ ಘಟನೆ ಉಡುಪಿಯಲ್ಲಿ ನಡೆದಿದೆ.

ರಾಜೇಶ್ ಅಮೀನ್ ಎಂಬವರು ಮೇ 11ರಂದು ಸ್ಕೂಟರ್ ಖರೀದಿಸುವ ಬಗ್ಗೆ ಆನ್ಲೈನ್ನಲ್ಲಿ ಪರಿಶೀಲನೆ ನಡೆಸಿದ್ದು, ಆಗ ವೆಬ್ಸೈಟ್ನಲ್ಲಿ ಕಂಡುಬಂದ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿದ ಇವರಿಗೆ ಮುಂಗಡ ಹಣ ಪಾವತಿಸುವಂತೆ ಬ್ಯಾಂಕ್ ಖಾತೆ ನಂಬರ್ ನೀಡಲಾಗಿತ್ತು.

ಇದನ್ನು ನಂಬಿದ ಅವರು ಒಟ್ಟು 69,439ರೂ. ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಅವರು ಸ್ಕೂಟರ್ ನೀಡದೇ ಪಡೆದ ಹಣವನ್ನು ವಾಪಾಸು ಕೊಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!