ಮಂಗಳೂರು;ಮೊಬೈಲ್ ಟವರ್ ವೊಂದು ಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಮಂಗಳೂರು ನಗರದ ಬಂದರು ಪ್ರದೇಶದಲ್ಲಿ ಇಂದು ಸಂಭವಿಸಿದೆ.
ಇಲ್ಲಿನ ಸೌತ್ ವಾರ್ಫ್ ರೋಡ್ ನ ಬಳಿ ಇರುವ ಕಟ್ಟಡದಲ್ಲಿ ಈ ದುರ್ಘಟನೆ ಸಂಭವಿಸಿದೆ. ಖಾಸಗಿ ಸ್ಥಳಲ್ಲಿರುವ ಬಹುಮಹಡಿ ಕಟ್ಟಡ ವೊಂದರ ಎರಡನೇ ಮಹಡಿಯಲ್ಲಿ ಬಿ.ಎಸ್.ಎನ್.ಎಲ್ ಹಾಗೂ ಜೀಯೊ ಮೊಬೈಲ್ ಟವರ್ ಗಳಿದ್ದು ಮಧ್ಯಾಹ್ನ ಎರಡೂವರೆ ಗಂಟೆ ಹೊತ್ತಿಗೆ ಬಿ.ಎಸ್.ಎನ್.ಎಲ್ ಟವರ್ ನಲ್ಲಿ ದಿಢೀರನೆ ಬೆಂಕಿ ಕಾಣಿಸಿ ಕೊಂಡಿದೆ.
ಈ ಬಗ್ಗೆ ಸ್ಥಳೀಯರು ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ ಅಗ್ನಿಶಾಮದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರೆ ಅಷ್ಟರಲ್ಲಿ ಬಿಎಸ್ ಎನ್ ಎಲ್ ಟವರ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.ಈ ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಘಟನೆಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದ ಅವಘಡ ಸಂಭವಿಸಿರ ಬಹುದು ಎಂದು ಶಂಕಿಸಲಾಗಿದೆ.