Saturday, June 13, 2026
Homeಕರಾವಳಿಉಪ್ಪಿನಂಗಡಿ: ಚರ್ಚ್‌ ಕಚೇರಿಯ ಬೀಗ ಒಡೆದು ನಗದು ಚಿನ್ನಾಭರಣ ಕಳ್ಳತನ

ಉಪ್ಪಿನಂಗಡಿ: ಚರ್ಚ್‌ ಕಚೇರಿಯ ಬೀಗ ಒಡೆದು ನಗದು ಚಿನ್ನಾಭರಣ ಕಳ್ಳತನ

- Advertisement -
- Advertisement -

ಉಪ್ಪಿನಂಗಡಿ: ಬೀಗ ಒಡೆದು ಚರ್ಚ್‌ ಕಚೇರಿಗೆ ನುಗ್ಗಿ ಚಿನ್ನಾಭರಣ ಹಾಗೂ ನಗದನ್ನು ಕಳ್ಳರು ದೋಚಿದ ಘಟನೆ ಉಪ್ಪಿನಂಗಡಿ ಬಳಿಯ ಶಿರಾಡಿ ಗ್ರಾಮದ ಸೈಂಟ್ ಪೀಟರ್ಸ್ ಮತ್ತು ಸೈಂಟ್ ಪಾಲ್ಸ್ ಜಾಕೋಬೈಟ್ ಸಿರಿಯನ್ ಚರ್ಚ್‌ ನಲ್ಲಿ ನಡೆದಿದೆ.

ಚರ್ಚ್‌ ಕಚೇರಿಯೊಳಗೆ ಬೀರುವಿನಲ್ಲಿಟ್ಟಿದ್ದ 12 ಗ್ರಾಂ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಹಾಗೂ 15,880 ರೂ.ನಗದು ಕಳ್ಳತನವಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!