Thursday, June 4, 2026
Homeಕರಾವಳಿಪುತ್ತೂರಿನಲ್ಲಿ ಅನ್ಯಕೋಮಿನ ಯುವಕನಿಗೆ ಹಲ್ಲೆ ಪ್ರಕರಣ; ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಪುತ್ತೂರಿನಲ್ಲಿ ಅನ್ಯಕೋಮಿನ ಯುವಕನಿಗೆ ಹಲ್ಲೆ ಪ್ರಕರಣ; ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ದಕ್ಷಿಣ ಕನ್ನಡ : ನಿನ್ನೆ ಹಿಂದೂ ಯುವತಿಯೊಂದಿಗೆ ಸಿನಿಮಾ ನೋಡಲು ಬಂದದ್ದಕ್ಕೆ ಅನ್ಯಕೋಮಿನ ಯುವಕನಿಗೆ ಥಳಿಸಿದ ಪ್ರಕರಣಕ್ಕೆ  ಸಂಬಂಧಿಸಿದಂತೆ ಪೊಲೀಸರು ನಾಲ್ವರು ಯುವಕರನ್ನು ಬಂಧಿಸಿದ್ದಾರೆ.ದಿನೇಶ್ ಗೌಡ (25) ಪ್ರಜ್ವಲ್​ (23) ನಿಶಾಂತ್ ಕುಮಾರ್​ (19) ಮತ್ತು ಪ್ರದೀಪ್​ (19) ಬಂಧಿತ ಆರೋಪಿಗಳು.

ಪುತ್ತೂರಿನ ಮರೀಲ್ ಕಾಡುಮನೆ ನಿವಾಸಿ ಕೆ.ಇಬ್ರಾಹಿಂ ಅವರ ಪುತ್ರ ಮಹಮ್ಮದ್ ಫಾರಿಶ್ ಹಿಂದೂ ಯುವತಿಯೊಂದಿಗೆ ಸಿನಿಮಾ ನೋಡಲು ಹೋಗಿದ್ದಾಗ ಯುವಕರ ಗುಂಪೊಂದು ಬಂದು ಹಿಗ್ಗಾಮುಗ್ಗಾ ಥಳಿಸಿ ಹಲ್ಲೆ ನಡೆಸಿತು. ಗಂಭೀರ ಗಾಯಗೊಂಡ ಮಹಮ್ಮದ್ ಫಾರಿಶ್ (18) ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ.

ಗಾಯಗೊಂಡ ಯುವಕ ತಂದೆ ಠಾಣೆಗೆ ದೂರು ನೀಡಿ ಬಳಿಕ ಪೊಲೀಸರು ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿ, ನಾಲ್ವರು ಯುವಕರನ್ನು ಬಂಧಿಸಿದ್ದಾರೆ. ದಿನೇಶ್ ಗೌಡ ಎಂಬ ಆರೋಪಿ ಆಟೋ ಚಾಲಕ ಎಂದು ತಿಳಿದುಬಂದಿದ್ದು, ಉಳಿದ ಮೂವರು ಕಾಲೇಜು ವಿದ್ಯಾರ್ಥಿಗಳು ಎನ್ನಲಾಗಿದೆ.

- Advertisement -

Latest News

error: Content is protected !!