Wednesday, June 3, 2026
Homeಕರಾವಳಿಸುಳ್ಯ; ಇಬ್ಬರು ಕೂಲಿ ಕಾರ್ಮಿಕರ ಮೇಲೆ ವ್ಯಕ್ತಿಯಿಂದ ಹಲ್ಲೆ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಸುಳ್ಯ; ಇಬ್ಬರು ಕೂಲಿ ಕಾರ್ಮಿಕರ ಮೇಲೆ ವ್ಯಕ್ತಿಯಿಂದ ಹಲ್ಲೆ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

- Advertisement -
- Advertisement -

ಸುಳ್ಯ ಸರಕಾರಿ ಬಸ್‌ ನಿಲ್ದಾಣದ ಬಳಿ ಇಬ್ಬರು ಕೂಲಿ ಕಾರ್ಮಿಕರಿಗೆ ವ್ಯಕ್ತಿಯೊಬ್ಬ ವಿನಾ ಕಾರಣ ಹಲ್ಲೆ ನಡೆಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸುಳ್ಯ ಕೆಎಸ್‌ಆರ್ಟಿಸಿ ಬಸ್‌ ನಿಲ್ದಾಣ ಮುಂಭಾಗದಲ್ಲಿರುವ ನಂದಿನಿ ಮಿಲ್ಕ್ ಸ್ಟೋರ್‌ ಬಳಿ ಇಬ್ಬರು ಕಾರ್ಮಿಕರು ಕುಳಿತಿದ್ದರು. ಈ ವೇಳ, ಓರ್ವ ವ್ಯಕ್ತಿ ಅಲ್ಲೆ ಪಕ್ಕದಲ್ಲಿರುವ ಬ್ಯಾಗ್‌ ಒಂದನ್ನು ತೋರಿಸಿ ಇದನ್ನು ಓಪನ್‌ ಮಾಡಿದವರು ಯಾರು ಎಂದು ಪ್ರಶ್ನಿಸಿ ಥಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಹಲ್ಲೆ ವೇಳೆ ಓರ್ವ ಅಲ್ಲಿಂದ ತಪ್ಪಿಸಿದ್ದು, ಮತ್ತೋರ್ವ ವ್ಯಕ್ತಿಯನ್ನು ವ್ಯಕ್ತಿ ಥಳಿಸಿ ಮೊಬೈಲ್‌ ಮೂಲಕ ಯಾರಿಗೋ ಮಾಹಿತಿ ನೀಡುವುದು ಸೆರೆಯಾಗಿದೆ.ಘಟನೆಯ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಭಾರೀ ವೈರಲ್‌ ಆಗಿದೆ.ಕಾರ್ಮಿಕರ ಮೇಲೆ ವಾಸ್ತವ ಅರಿಯದೆ ಸುಮ್ಮನೆ ಹಲ್ಲೆ‌ ನಡೆಸಿರುವ ಆರೋಪ ಕೇಳಿ ಬಂದಿದೆ.ಅಲ್ಲದೇ ನೆಟ್ಟಿಗರು ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!