Wednesday, June 3, 2026
Homeತಾಜಾ ಸುದ್ದಿಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ಮೇಲೆ ಕಲ್ಲೆಸೆತ; ತಲೆಗೆ ಗಂಭೀರ ಗಾಯ

ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ಮೇಲೆ ಕಲ್ಲೆಸೆತ; ತಲೆಗೆ ಗಂಭೀರ ಗಾಯ

- Advertisement -
- Advertisement -

ತುಮಕೂರಿನ  ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮೇಲೆ ಪ್ರಚಾರದ ವೇಳೆ ಎಸೆಯಲಾಗಿದೆ. ಕಲ್ಲು ಪರಮೇಶ್ವರ್ ತಲೆಗೆ ತಾಗಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಾರೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಇಂದು ಕೊಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ ಪರಮೇಶ್ವರ್ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ಈ ವೇಳೆ ಕಾರ್ಯಕರ್ತರು ಅವರನ್ನು ಎತ್ತಿಕೊಂಡು ಕುಣಿಯುತ್ತಿದ್ದರು. ಇದೇ ಸಂದರ್ಭದಲ್ಲಿ ಹೂವಿನ ಸುರಿಮಳೆಯನ್ನ ಸುರಿಸಲಾಗುತ್ತಿತ್ತು. ಇದೇ ವೇಳೆ ದುಷ್ಕರ್ಮಿಯೊಬ್ಬ ಕಲ್ಲು ಎಸೆದಿದ್ದಾನೆ..

ದುಷ್ಕರ್ಮಿ ಎಸೆದ  ಕಲ್ಲು ಡಾ.ಜಿ ಪರಮೇಶ್ವರ್ ಅವರ ತಲೆಗೆ ಬಡಿದಿದೆ. ಇದರಿಂದ ಗಾಯಗೊಂಡು ರಕ್ತಸ್ತ್ರಾವ ಉಂಟಾಗಿದೆ. ಕೂಡಲೇ ಅವರನ್ನು ಕಾರ್ಯಕರ್ತರು ಸಮೀಪದ ಅಕ್ಕಿರಾಂಪುರದಲ್ಲಿನ ಪ್ರಾಥಮಿಕ ಆರೋಗ್ಯಕ್ಕೆ ದಾಖಲಿಸಿದ್ದಾರೆ. ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಅಲ್ಲಿನ ವೈದ್ಯರು ನೀಡಿದ್ದಾರೆ.

ಅಕ್ಕಿರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆಯ ಪಡೆದ ಬಳಿಕ, ಪರಮೇಶ್ವರ್ ಅವರನ್ನು ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇದೀಗ ಅಲ್ಲಿ ವೈದ್ಯರು ಪರಮೇಶ್ವರ್ ಅವರಿಗೆ ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ.

ಅಂದಹಾಗೆ ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಮೇಲೆ ಕಲ್ಲು ತೂರಾಟ ನಡೆಸಿದಂತ ದುಷ್ಕರ್ಮಿ ಯಾರು ಎನ್ನುವ ಬಗ್ಗೆ ಮಾಹಿತಿ ತಿಳಿಯಬೇಕಿದೆ.

- Advertisement -

Latest News

error: Content is protected !!