Thursday, June 25, 2026
Homeಕರಾವಳಿಬೆಳ್ತಂಗಡಿ : ಗುರುವಾಯನಕೆರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವು

ಬೆಳ್ತಂಗಡಿ : ಗುರುವಾಯನಕೆರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವು

- Advertisement -
- Advertisement -

ಬೆಳ್ತಂಗಡಿ : ಮೆಡಿಕಲ್ ಕೋರ್ಸ್ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ಬರೆಯಲು ಹಾಸ್ಟೆಲ್ ಗೆ ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಏ.28 ರಂದು ಬೆಳಗ್ಗೆ ಗುರುವಾಯನಕೆರೆಯ ಎಕ್ಸೆಲ್ ವಿದ್ಯಾಸಂಸ್ಥೆಯ ಹಾಸ್ಟೆಲ್ ನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ವಿದ್ಯಾನಗರ ಎರಡನೇ ಅಡ್ಡ ರಸ್ತೆಯ ನಿವಾಸಿ ಸನಾವುಲ್ಲ ಮತ್ತು ಸೀಮಾ ಪಾರ್ವಿನ್ ದಂಪತಿ ಪುತ್ರಿ ಉಮೆ ಉಜ್ಮಾ (19) ಮೃತ ವಿದ್ಯಾರ್ಥಿನಿ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಎಕ್ಸೆಲ್ ಕಾಲೇಜಿನಲ್ಲಿ ಮೆಡಿಕಲ್ ಕೋರ್ಸ್ ಪ್ರವೇಶಕ್ಕಾಗಿ ನೀಟ್ ಪರೀಕ್ಷೆ ಮೇ.7 ರಂದು ನಡೆಯಲಿದ್ದು. ನವೆಂಬರ್ ತಿಂಗಳಲ್ಲಿ ಪೂರ್ವ ತಯಾರಿ ಮಾಡಲು ಕಾಲೇಜಿನ ಹಾಸ್ಟೆಲ್ ಗೆ ಬಂದಿದ್ದ ವಿದ್ಯಾರ್ಥಿನಿ ಉಮೆ ಉಜ್ಮಾ (19) ಏ. 28 ರಂದು ಬೆಳಗ್ಗೆ ಸುಮಾರು 5 ಗಂಟೆಗೆ ಹಾಸ್ಟೆಲ್ ನ ಕಟ್ಟಡದ ಮಹಡಿಯಿಂದ ಕೆಳಗೆ ಬಿದ್ದ ಸ್ಥಿತಿಯಲ್ಲಿ ಗಂಭೀರ ಗಾಯಗೊಂಡಿದ್ದು ತಕ್ಷಣ ಆಡಳಿತ ಮಂಡಳಿ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಿಸದೆ ಬೆಳಗ್ಗೆ 9 ಗಂಟೆಗೆ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ವಿದ್ಯಾರ್ಥಿನಿ ಪರೀಕ್ಷೆಯ ವಿಚಾರದಲ್ಲಿ ಭಯದಿಂದ ಮನನೊಂದು ಆತ್ಮಹತ್ಯೆ  ಮಾಡಿಕೊಂಡಳೋ ಅಥವಾ ಕಟ್ಟಡದಿಂದ ಜಾರಿ ಬಿದ್ದು ಸಾವನ್ನಪ್ಪಿದ್ದಾಳ ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಲು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ತಂದೆ ಸನಾವುಲ್ಲ ದೂರು ನೀಡಿದ್ದಾರೆ.

- Advertisement -

Latest News

error: Content is protected !!