Thursday, June 4, 2026
Homeತಾಜಾ ಸುದ್ದಿಸಿ.ಟಿ.ರವಿಯವರೇ ಮುಂದಿನ ಸಿಎಂ ಆಗಲಿ: ಕುತೂಹಲ ಮೂಡಿಸಿದ ಈಶ್ವರಪ್ಪ ಹೇಳಿಕೆ

ಸಿ.ಟಿ.ರವಿಯವರೇ ಮುಂದಿನ ಸಿಎಂ ಆಗಲಿ: ಕುತೂಹಲ ಮೂಡಿಸಿದ ಈಶ್ವರಪ್ಪ ಹೇಳಿಕೆ

- Advertisement -
- Advertisement -

ಚಿಕ್ಕಮಗಳೂರು: ರಾಜ್ಯದಲ್ಲಿ ಈಗಾಗಲೇ ಲಿಂಗಾಯತ ಸಿಎಂ ಬಗ್ಗೆ ಭಾರೀ ಚರ್ಚೆಗಳು, ಹೇಳಿಕೆಗಳು ಚಾಲ್ತಿಯಲ್ಲಿರುವಾಗಲೇ ಇದೀಗ ಸಿ.ಟಿ.ರವಿ ಮುಂದಿನ ಸಿಎಂ ಆಗಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿರೋದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ, ಈಶ್ವರಪ್ಪ ಬಹಿರಂಗವಾಗಿಯೇ ಸಿಟಿ ರವಿ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಹೇಳಿದ್ದಾರೆ. ಇದೀಗ ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಜೆಪಿ ವಲಯದಲ್ಲಿ ಒಂದು ಕಡೆ ಬೊಮ್ಮಾಯಿಯವರೇ ಮುಂದಿನ ಸಿಎಂ ಎಂದು ಹೇಳಲಾಗ್ತಿದೆ. ಈ ನಡುವೆ ಈಶ್ವರಪ್ಪ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದ್ದಂತೂ ಸುಳ್ಳಲ್ಲ.

- Advertisement -

Latest News

error: Content is protected !!