Friday, June 5, 2026
Homeಕರಾವಳಿಧರ್ಮಸ್ಥಳ : ನಿಖಿಲ್ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಆಗಮನ

ಧರ್ಮಸ್ಥಳ : ನಿಖಿಲ್ ಕುಮಾರಸ್ವಾಮಿ ಧರ್ಮಸ್ಥಳಕ್ಕೆ ಆಗಮನ

- Advertisement -
- Advertisement -

ಬೆಳ್ತಂಗಡಿ : ನಿಖಿಲ್ ಕುಮಾರಸ್ವಾಮಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ನಂತರ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರನ್ನು ಮತ್ತು ಹರ್ಷೇಂದ್ರ ಕುಮಾರ್ ಅವರನ್ನು ಭೇಟಿ ಮಾಡಿ. ಅನ್ನಛತ್ರದಲ್ಲಿ ಊಟ ಮಾಡಿದರು. ಧರ್ಮಸ್ಥಳ ಭೇಟಿ ಬಳಿಕ ನೇರವಾಗಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಿದರು.

ಇನ್ನು ಇದೇ ವೇಳೆ ಮಾತನಾಡಿದ ಅವರು ಜೆಡಿಎಸ್ ಗೆ ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟವರು ದೊಡ್ಡ ಪ್ರಮಾಣದಲ್ಲಿ ಸೇರ್ಪಡೆಯಾಗಲಿದ್ದಾರೆ ಎಂದರು.ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಕಟ್ಟಿದವರೆ ಪಕ್ಷ ಬಿಡುತ್ತಿದ್ದಾರೆ.ಅವರೆಲ್ಲ ದೇವೆಗೌಡರ, ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷಕ್ಕೆ ಬರಲಿದ್ದಾರೆ.ಜೆಡಿಎಸ್ ಪಕ್ಷಕ್ಕೆ ಬಂದವರನ್ನು ಪಕ್ಷ ಈ ಹಿಂದೆ ಕೈಬಿಟ್ಟಿಲ್ಲ, ಕೈಬಿಡಲ್ಲ ಎಂದರು.

ನಿಖಿಲ್ ಕುಮಾರಸ್ವಾಮಿ ಧರ್ಮಸ್ಥಳ ಭೇಟಿ ವೇಳೆ ದ.ಕ ಜೆಡಿಎಸ್.ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ , ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಧರ್ಮರಾಜ್,ಯುವ ಜಿಲ್ಲಾ ಉಸ್ತುವಾರಿ ರತೀಶ್ ಕರ್ಕೇರಾ, ಹಿತೇಶ್ ರೈ , ಬೆಳ್ತಂಗಡಿ ತಾಲೂಕು ಜೆಡಿಎಸ್ ಅಧ್ಯಕ್ಷ ಶ್ರೀನಿವಾಸ್ ಗೌಡ ಜೊತೆಯಲ್ಲಿದ್ದರು.

- Advertisement -

Latest News

error: Content is protected !!