Sunday, June 7, 2026
Homeಕರಾವಳಿಮಂಗಳೂರು; ಸಹಾಯಕ ಪ್ರೊಫೆಸರ್ ನಾಪತ್ತೆ

ಮಂಗಳೂರು; ಸಹಾಯಕ ಪ್ರೊಫೆಸರ್ ನಾಪತ್ತೆ

- Advertisement -
- Advertisement -

ಮಂಗಳೂರು: ಸಹಾಯಕ ಪ್ರೊಫೆಸರ್ ನಾಪತ್ತೆಯಾಗಿರುವ ಘಟನೆ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ  ದೇರಳಕಟ್ಟೆಯ ಕಾಲೇಜೊಂದರ ಸಹಾಯಕ ಪ್ರೊಫೆಸರ್ ಡಾ. ಗೌತಮ್ ಬಿ. ಕಾಂಬ್ಲೆ (32) ಮಾ.30ರಿಂದ ಕಾಣೆಯಾಗಿದ್ದಾರೆ ಎಂದು  ಅವರ ಪತ್ನಿ ಜೋತ್ಸ್ನಾ ಗೌತಮ್ ಕಾಂಬ್ಳೆ ದೂರು ನೀಡಿದ್ದಾರೆ.

ಗೌತಮ್ ಬಿ. ಕಾಂಬ್ಲೆ ಅವರು ಅಂದು ಬೆಳಗ್ಗೆ 7:30ಕ್ಕೆ ಮನೆಯಿಂದ ಕಾರಿನಲ್ಲಿ ಹೋದವರು ಕಾಣೆಯಾಗಿದ್ದಾರೆ.ಇವರ ಮೊಬೈಲ್ ಸ್ವಿಚ್‌ ಆಫ್ ಆಗಿದೆ ಎಂದು ಪತ್ನಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

5.4 ಅಡಿ ಎತ್ತರ, ಗೋಧಿ ಮೈ ಬಣ್ಣ ಹೊಂದಿದ್ದು, ಕನ್ನಡ, ಇಂಗ್ಲಿಷ್, ಮರಾಠಿ, ಹಿಂದಿ, ತುಳು ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ತುಂಬು ತೋಳಿನ ಕಪ್ಪು ಬಣ್ಣದ ಶರ್ಟ್ ಹಾಗೂ ಬಿಳಿ ಬಣ್ಣದ ಫ್ಯಾಂಟ್ ಧರಿಸಿರುತ್ತಾರೆ. ಇವರನ್ನು ಕಂಡವರು ಉರ್ವ ಠಾಣೆಗೆ (0824-2220521) ಮಾಹಿತಿ ನೀಡುವಂತೆ ಕೋರಲಾಗಿದೆ.

- Advertisement -

Latest News

error: Content is protected !!