Thursday, June 4, 2026
Homeಕರಾವಳಿಉಡುಪಿ: ವ್ಯಕ್ತಿಯ ಖಾತೆಯಿಂದ ಲಕ್ಷಾಂತರ ರೂಪಾಯಿ ಅಕ್ರಮವಾಗಿ ವರ್ಗಾವಣೆ

ಉಡುಪಿ: ವ್ಯಕ್ತಿಯ ಖಾತೆಯಿಂದ ಲಕ್ಷಾಂತರ ರೂಪಾಯಿ ಅಕ್ರಮವಾಗಿ ವರ್ಗಾವಣೆ

- Advertisement -
- Advertisement -

ಉಡುಪಿ: ವ್ಯಕ್ತಿಯೊಬ್ಬರ ಖಾತೆಯಿಂದ ಆನ್ ಲೈನ್ ಮುಖಾಂತರ ಲಕ್ಷಾಂತರ ರೂ. ಹಣ ವನ್ನು ವರ್ಗಾವಣೆ ಮಾಡಿ ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ ತಾಲೂಕಿನ ಕಾಂತಾವರದ ಚೇತನ್ ಕುಮಾರ್ ಎಂಬವರು ಬೆಂಗಳೂರಿನ ಜೀವನ್ ಭೀಮಾನಗರ ಎಂಬಲ್ಲಿ ಬ್ಯಾಂಕ್ ಖಾತೆ ಹೊಂದಿದ್ದು, ಮಾ.28 ರಂದು ಇವರ ಖಾತೆಯಿಂದ ಒಟ್ಟು 1,98,500ರೂ.ಹಣವನ್ನು ಅಪರಿಚಿತ ವ್ಯಕ್ತಿಗಳು ಅವರ ಅನುಮತಿ ಇಲ್ಲದೇ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿ, ವಂಚಿಸಿರುವುದಾಗಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!