Thursday, June 4, 2026
Homeಕರಾವಳಿಉಡುಪಿಕಾಪು: ಪಾಂಗಾಳ ಶರತ್ ವಿ. ಶೆಟ್ಟಿ ಕೊಲೆ ಪ್ರಕರಣ: ಕೊಲೆಗಾರರ ವಿರುದ್ಧ ಕ್ರಮಕ್ಕೆ ದೈವದ ಮೊರೆ...

ಕಾಪು: ಪಾಂಗಾಳ ಶರತ್ ವಿ. ಶೆಟ್ಟಿ ಕೊಲೆ ಪ್ರಕರಣ: ಕೊಲೆಗಾರರ ವಿರುದ್ಧ ಕ್ರಮಕ್ಕೆ ದೈವದ ಮೊರೆ ಹೋದ ಕುಟುಂಬಸ್ಥರು

- Advertisement -
- Advertisement -

ಕಾಪು: ಪಾಂಗಾಳ ಶರತ್ ವಿ. ಶೆಟ್ಟಿ ಕೊಲೆ ಸಂಬಂಧ ಪ್ರಮುಖ ಆರೋಪಿಗಳ ಪತ್ತೆಗಾಗಿ ಹಾಗೂ ಕೊಲೆಗಾರರ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರು ದೈವದ ಮೊರೆ ಹೋಗಿದ್ದಾರೆ. ನಿನ್ನೆ (ಮಾರ್ಚ್ 23) ಪಾಂಗಾಳ ಗ್ರಾಮದಲ್ಲಿ ನಡೆದ ವರ್ತೆ ಪಂಜುರ್ಲಿ ದೈವದ ಕೋಲದಲ್ಲಿ ಶರತ್ ಶೆಟ್ಟಿ ಕೊಲೆ ಸಂಬಂಧ ಕುಟುಂಬಸ್ಥರು ನ್ಯಾಯ ಕೇಳಿದ್ದಾರೆ.

ಈ ವೇಳೆ ಕೊಲೆ ಆರೋಪಿಗಳು ಅದೆಲ್ಲೇ ಇದ್ರೂ ಹುಡುಕುತ್ತೇನೆಂದು ದೈವ ಅಭಯ ನೀಡಿದೆ ಎನ್ನಲಾಗಿದೆ. ಶರತ್‌ ಶೆಟ್ಟಿ ಕೊಲೆಯಾಗಿ ತಿಂಗಳೇ ಕಳೆದಿದೆ. ಆದ್ರೆ ಪ್ರಮುಖ ಆರೋಪಿಗಳ ಬಂಧನವಿನ್ನೂ ಆಗಿಲ್ಲ. ಹೀಗಾಗಿ ಕುಟುಂಬಸ್ಥರು ದೈವದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!