Saturday, June 6, 2026
Homeಕರಾವಳಿಬೆಳ್ತಂಗಡಿ : 108 ಆಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಬೆಳ್ತಂಗಡಿ : 108 ಆಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

- Advertisement -
- Advertisement -

ಬೆಳ್ತಂಗಡಿ : 108 ಆಂಬ್ಯುಲೆನ್ಸ್ ನಲ್ಲೇ ಮಹಿಳೆಯೊಬ್ಬರು ಗಂಡು‌‌ ಮಗುವಿಗೆ ಜನ್ಮ ನೀಡಿದ ಘಟನೆ  ಪಡಂಗಡಿ ಎಂಬಲ್ಲಿ ನಡೆದಿದೆ.

ವೇಣೂರು ಸನಿಹದ ಗೋಳಿಯಂಗಡಿಯಲದ ನಿವಾಸಿ ಭಾಸ್ಕರ ಅವರ ಪತ್ನಿ ಗೀತಾ(24)  ಅವರನ್ನು ಹೆರಿಗೆ ನೋವಿನ ಹಿನ್ನೆಲೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ 108 ಆಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ‌ ನೀಡಿದ್ದಾರೆ.

ತುರ್ತು ಕರೆ ಆಧರಿಸಿ 108   ಆಂಬ್ಯುಲೆನ್ಸ್ ನಲ್ಲಿ ಅವರನ್ನು ಆಸ್ಪತ್ರೆಗೆ ಕರೆತರುವ ಪ್ರಯತ್ನದ ಮಧ್ಯೆಯೇ ಅವರು ಪಡಂಗಡಿ ತಲುಪುತ್ತಿದ್ದಂತೆ ತಡರಾತ್ರಿ 2.57 ಗಂಟೆಗೆ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.

ನಾರಾವಿ ಕೇಂದ್ರದ ಆಂಬ್ಯುಲೆನ್ಸ್ ಇದಾಗಿದ್ದು ಆರೋಗ್ಯ ಶುಶ್ರೂಷಕಿ ಪೂರ್ಣಿಮಾ ಅವರು ಈ ಸಂದರ್ಭ ಸಕಾಲಿಕ ನೆರವು ನೀಡಿದ್ದಾರೆ. ವಾಹನ ಚಾಲಕ(ಪೈಲೆಟ್) ಭೂದೇವಪ್ಪ ಪೂರಕ ಸಹಕಾರ ನೀಡಿದ್ದಾರೆ. ಆರಂಭಿಕ ಚಿಕಿತ್ಸೆ ನೀಡಿದ ಬಳಿಕ ತಾಯಿ ಮಗು ಇಬ್ಬರನ್ನೂ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ  ದಾಖಲಿಸಲಾಗಿದೆ. ಸದ್ಯ ಇಬ್ಬರೂ ಕ್ಷೇಮವಾಗಿದ್ದಾರೆ.

- Advertisement -

Latest News

error: Content is protected !!