Thursday, June 4, 2026
Homeಕರಾವಳಿಮಾ.24 ರಂದು ಸುಬ್ರಮಣ್ಯಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

ಮಾ.24 ರಂದು ಸುಬ್ರಮಣ್ಯಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ

- Advertisement -
- Advertisement -

ಸುಬ್ರಹ್ಮಣ್ಯ ; ಮಾ.24 ರಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸುಬ್ರಮಣ್ಯಕ್ಕೆ ಆಗಮಿಸಲಿದ್ದಾರೆ. ದೇವಸ್ಥಾನದ ಮಾಸ್ಟರ್ ಪ್ಲಾನ್ ನ 300  ಕೋಟಿಯ ಕಾಮಾಗಾರಿಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು  ಸಚಿವ ಎಸ್ ಅಂಗಾರ ತಿಳಿಸಿದ್ದಾರೆ.

300 ಕೋಟಿಯ ಮಾಸ್ಟರ್ ಪ್ಲಾನ್ ಸಮಿತಿ ಕಾಮಗಾರಿಯಲ್ಲಿ ರಥಬೀದಿ, ಆಶ್ಲೇಷ ಮಂಟಪ, ಅನ್ನಛತ್ರ, ಕುಮಾರಧಾರ ಸ್ನಾನ ಘಟ್ಟ, ಕಮರ್ಶಿಯಲ್ ಕಾಂಪ್ಲೆಕ್ಸ್ ಮತ್ತಿತರ ಕೆಲಸಗಳು ನಡೆಯಲಿವೆ.

 ರಥಬೀದಿ ಮುಂಭಾಗ ಶಿಲಾಮಯ ರಾಜ ಗೋಪುರ ಇರಲಿದ್ದು ಹೊರಗಿನಿಂದ ವಿಜಯನಗರ ಶೈಲಿಯ ರಾಜಬೀದಿ ಕಾಣಿಸಲಿದ್ದು, ಒಳಾಂಗಣದಲ್ಲಿ ಮೈಸೂರು ರಾಜ ಪರಂಪರೆಯ ಕುಸುರಿ ಕೆತ್ತನೆ ಇರಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಾದರಿಯ ಮರದ ಮಾಡು ಇರಲಿದೆ ಎನ್ನಲಾಗಿದೆ.

- Advertisement -

Latest News

error: Content is protected !!