Sunday, June 7, 2026
Homeತಾಜಾ ಸುದ್ದಿಮೇ 18 ರಂದು ಸೆಟ್ಟೇರಲಿರುವ ಉರಿಗೌಡ ನಂಜೇಗೌಡ ಚಲನಚಿತ್ರ

ಮೇ 18 ರಂದು ಸೆಟ್ಟೇರಲಿರುವ ಉರಿಗೌಡ ನಂಜೇಗೌಡ ಚಲನಚಿತ್ರ

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ಉರಿಗೌಡ ಮತ್ತು ನಂಜೇಗೌಡ ವಿಚಾರ ಈಗ ಸಿನಿಮಾವಾಗಿ ಸೆಟ್ಟೇರುತ್ತಿದೆ.‌ ಚಲನಚಿತ್ರ ನಿರ್ಮಾಪಕ ಮತ್ತು ಸಚಿವ ಮುನಿರತ್ನ ಉರಿಗೌಡ ನಂಜೇಗೌಡ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಮೇ 18 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಬೆಳಗ್ಗೆ 10 ಗಂಟೆಗೆ ಸಿನಿಮಾದ ಮುಹೂರ್ತ ನಡೆಯಲಿದೆ. ಐತಿಹಾಸಿಕ ಘಟನೆಗಳನ್ನಾಧರಿಸಿ ನಿರ್ಮಾಣವಾಗಲಿರುವ ಸಿನಿಮಾವನ್ನು ಸಚಿವ ಆರ್‌. ಅಶೋಕ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅರ್ಪಿಸಲಿದ್ದಾರೆ.

ವೃಷಭಾದ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರ ಚಿತ್ರಕಥೆಯೊಂದಿಗೆ ಆರ್.ಎಸ್. ಗೌಡ ಸಿನಿಮಾವನ್ನು‌ ನಿರ್ದೇಶನ ಮಾಡುತ್ತಿದ್ದಾರೆ.

ಶುಕ್ರವಾರ ನಿರ್ಮಾಪಕ ಮುನಿರತ್ನ ಉರಿಗೌಡ ನಂಜೇಗೌಡ ಚಿತ್ರದ ಟೈಟಲ್ ಅನ್ನು ಚಲನಚಿತ್ರ ವಾಣಿಜ್ಯ ‌ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸಿದ್ದರು.

- Advertisement -

Latest News

error: Content is protected !!