Saturday, June 6, 2026
Homeತಾಜಾ ಸುದ್ದಿಶ್ರೀಕೃಷ್ಣನೇ ನನ್ನ ಪತಿಯೆಂದು ದೇವರನ್ನು ವಿವಾಹವಾದ ಕಾನೂನೂ ವಿದ್ಯಾರ್ಥಿನಿ

ಶ್ರೀಕೃಷ್ಣನೇ ನನ್ನ ಪತಿಯೆಂದು ದೇವರನ್ನು ವಿವಾಹವಾದ ಕಾನೂನೂ ವಿದ್ಯಾರ್ಥಿನಿ

- Advertisement -
- Advertisement -

ಉತ್ತರಪ್ರದೇಶ; ಶ್ರೀಕೃಷ್ಣನೇ ನನ್ನ ಪತಿಯೆಂದು ದೇವರನ್ನು ಕಾನೂನೂ ವಿದ್ಯಾರ್ಥಿನಿಯೊಬ್ಬಳು ವಿವಾಹವಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ,

 ರಕ್ಷಾ(30) ಎಂಬ ಕಾನೂನು ವಿದ್ಯಾರ್ಥಿನಿ ಶ್ರೀಕೃಷ್ಣ ದೇವರನ್ನು ಶ್ರದ್ಧೆಯಿಂದ ಪೂಜಿಸುತ್ತಿದ್ದಳು. ಹೀಗಾಗಿ ಕೃಷ್ಣನ ಮೇಲಿನ ಭಕ್ತಿ ಮುಂದುವರಿಸಲು ಶ್ರೀಕೃಷ್ಣನನ್ನು ಮದುವೆಯಾಗಿದ್ದಾಳೆ.

ರಕ್ಷಾ ತಂದೆ ರಂಜಿತ್ ಸಿಂಗ್ ಸೋಲಂಕಿ ಅವರೇ ವಿವಾಹ ಕಾರ್ಯ ನೋಡಿಕೊಂಡಿದ್ದಾರೆ..ಅದ್ಧೂರಿಯಾಗಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ರಕ್ಷಾಳ ಕುಟುಂಬಸ್ಥರು, ಆಪ್ತರು ಪಾಲ್ಗೊಂಡು ಆಶೀರ್ವದಿಸಿದ್ದಾರೆ.

ಮದುವೆ ವೇಳೆ ಆರತಿ ಬೆಳಗಿದ್ದಾರೆ. ಬಳಿಕ ಸಂಗೀತಕ್ಕೆ ಹೆಜ್ಜೆ ಹಾಕಿದ್ದಾರೆ.ಬಳಿಕ ವಧು ರಕ್ಷಾ ಕೃಷ್ಣನ ಮೂರ್ತಿಯೊಂದಿಗೆ ಸುಖಚೈನ್‌ಪುರ ಪ್ರದೇಶದಲ್ಲಿನ ತನ್ನ ಸಂಬಂಧಿಕರ ಮನೆಗೆ ತೆರಳಿದ್ದಾಳೆ.ಅಲ್ಲಿಂದ ಶ್ರೀಕೃಷ್ಣನ ಮೂರ್ತಿಯನ್ನು ಹೊತ್ತುಕೊಂಡು ತವರಿಗೆ ಬಂದಿದ್ದಾಳೆ ಎನ್ನಲಾಗಿದೆ.

- Advertisement -

Latest News

error: Content is protected !!