Saturday, June 6, 2026
Homeಉದ್ಯಮ2 ವರ್ಷದಲ್ಲೇ ದಾಖಲೆಯ ಏರಿಕೆಯತ್ತ ಪೆಟ್ರೋಲ್, ಡೀಸೆಲ್ ಬೆಲೆ

2 ವರ್ಷದಲ್ಲೇ ದಾಖಲೆಯ ಏರಿಕೆಯತ್ತ ಪೆಟ್ರೋಲ್, ಡೀಸೆಲ್ ಬೆಲೆ

- Advertisement -
- Advertisement -

ನವದೆಹಲಿ : ಭಾರತದಲ್ಲಿ ಮಹಾಮಾರಿ ಕೊರೊನ ಪ್ರತಿಕೂಲ ಪರಿಣಾಮದ ನಡುವೆಯೂ ,ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತ 15ನೇ ದಿನವೂ ಏರಿಕೆ ಕಂಡಿದ್ದು, ಎರಡು ವರ್ಷದಲ್ಲೇ ಗರಿಷ್ಠ ಮಟ್ಟವನ್ನು ತಲುಪಿ, ಗ್ರಾಹಕರಿಗೆ ಬರೆ ಬಿದ್ದಿದೆ.
ಬೆಳಿಗ್ಗೆ 6 ರಿಂದ ಜಾರಿಗೆ ಬರುವಂತೆ, ದೆಹಲಿಯಲ್ಲಿ ಪೆಟ್ರೋಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 60 ಪೈಸೆ ಮತ್ತು ಡೀಸೆಲ್ ಅನ್ನು ಲೀಟರ್‌ಗೆ 35 ಪೈಸೆ ಹೆಚ್ಚಿಸಿದೆ. ಹಿಂದಿನ ದಿನ ರಾಷ್ಟ್ರೀಯ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 78.88 ರೂ.ನಿಂದ 79.238 ರೂ.ಗೆ ಪರಿಷ್ಕರಿಸಲಾಗಿದ್ದರೆ, ಡೀಸೆಲ್ ದರವನ್ನು ಲೀಟರ್‌ಗೆ 77.67 ರೂ.ಗಳಿಂದ 78.27 ರೂ.ಗೆ ಹೆಚ್ಚಿಸಲಾಗಿದೆ ಎಂದು ಸರ್ಕಾರಿ ಭಾರತೀಯ ತೈಲ ಪ್ರಕಟಣೆ ತಿಳಿಸಿದೆ.
ಇನ್ನು ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 80.95ರೂ. ಮತ್ತು ಡಿಸೇಲ್ ದರ 73.61ರೂ. ದಾಖಲಾಗಿದೆ. ಮುಂಬೈ ನಲ್ಲಿ ಪೆಟ್ರೋಲ್ ದರ 86.04 ಮತ್ತು ಡಿಸೇಲ್ ಬೆಲೆ 76.69 ರೂ ದಾಖಲಾಗಿದೆ.
15 ದಿನಗಳ ಅವಧಿಯಲ್ಲಿ, ಪೆಟ್ರೋಲ್ ಬೆಲೆಯನ್ನು ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್‌ಗೆ 8.88 ರೂ., ಮತ್ತು ಡೀಸೆಲ್ ಅನ್ನು ಪ್ರತಿ ಲೀಟರ್‌ಗೆ 7.97 ರೂ. ಹೆಚ್ಚಿಸಲಾಗಿದೆ.

- Advertisement -

Latest News

error: Content is protected !!