- Advertisement -
![]()
- Advertisement -
ಮಂಗಳೂರು: ಇಲ್ಲಿನ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲಗುತ್ತು ಎಂಬಲ್ಲಿ ಮಾ.1ರಂದು ತನ್ನ ಪುತ್ರಿಯೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂಬ ಆರೋಪದಡಿ ಕೇಶವ ಎಂಬಾತನನ್ನು ಬಂಧಿಸಿದ್ದಾರೆ.ಆರೋಪಿ ಕೇಶವ ಎಂಬಾತನು ವಿಜಯ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಲಾಗಿದೆ.
ವಿಜಯ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್ನೋಟ್ ಮನೆಯಲ್ಲಿ ಪೊಲೀಸರಿಗೆ ಸಿಕ್ಕಿದ್ದು, ಅದರ ಆಧಾರದಲ್ಲಿ ತನಿಖೆ ಮುಂದುವರೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೋಡಿಯಾಲಗುತ್ತು ನಿವಾಸಿ ವಿಜಯಾ (33) ಅವರು ತನ್ನ ನಾಲ್ಕು ವರ್ಷದ ಪುತ್ರಿ ಶೋಭಿಕಾ ಹಾಗೂ 12 ವರ್ಷದ ಪುತ್ರಿಯೊಂದಿಗೆ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಪೈಕಿ 12 ವರ್ಷದ ಪುತ್ರಿ ಅಪಾಯದಿಂದ ಪಾರಾಗಿದ್ದರೆ, ವಿಜಯಾ ಮತ್ತು ಶೋಭಿಕಾ ಮೃತಪಟ್ಟಿದ್ದಾರೆ.
- Advertisement -


