Saturday, June 6, 2026
Homeತಾಜಾ ಸುದ್ದಿಭಾರತದಲ್ಲಿ ದಾಖಲೆಯತ್ತ ಕೊರೊನ : 24 ಗಂಟೆಗಳಲ್ಲಿ 15,413 ಮಂದಿಯಲ್ಲಿ ಸೋಂಕು ದೃಢ

ಭಾರತದಲ್ಲಿ ದಾಖಲೆಯತ್ತ ಕೊರೊನ : 24 ಗಂಟೆಗಳಲ್ಲಿ 15,413 ಮಂದಿಯಲ್ಲಿ ಸೋಂಕು ದೃಢ

- Advertisement -
- Advertisement -

ನವದೆಹಲಿ : ದೇಶದಲ್ಲಿ ಕಿಲ್ಲರ್ ಕೊರೊನಾ ಮಹಾಮಾರಿ ಆರ್ಭಟಿಸುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 15,413 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಈ ಅವಧಿಯಲ್ಲಿ 306 ಮಂದಿ ಮೃತಪಟ್ಟಿದ್ದಾರೆ.ಅದೇ ರೀತಿ ಒಟ್ಟು ಸೋಂಕಿತರ ಸಂಖ್ಯೆ 4,10,461 ಕ್ಕೆ ಏರಿಕೆ ಆಗಿದೆ .
ಈವರೆಗೆ 4,10,461 ಮಂದಿ ಸೋಂಕಿತರ ಪೈಕಿ 227756 ಸೋಂಕಿನಿಂದ ಗುಣಮುಖರಾಗಿದ್ದು, ಇನ್ನೂ ದೇಶದಲ್ಲಿ 169451 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಒಟ್ಟು ಸಾವಿನ ಸಂಖ್ಯೆ 13,254ಕ್ಕೆ ಏರಿಕೆಯಾಗಿದೆ.
ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈಗ 5ನೇ ಹಂತದ ಲಾಕ್ ಡೌನ್ ಜಾರಿಗೊಳಿಸಿದ್ದು, ಜೂನ್ 30ಕ್ಕೆ ಅಂತ್ಯಗೊಳ್ಳಲಿದೆ. ಇದರ ಮಧ್ಯೆ ಸಾಕಷ್ಟು ಸಡಿಲಿಕೆ ಮಾಡಿರುವ ಕಾರಣ ಸೋಂಕಿನ ಪ್ರಮಾಣ ದಿನೇ ದಿನೇ ಏರಿಕೆಯಾಗುತ್ತಿದೆ.

- Advertisement -

Latest News

error: Content is protected !!