Thursday, June 4, 2026
Homeಕರಾವಳಿಉಡುಪಿಉದ್ಯಾವರ: ಇದು ನನ್ನ ಕೊನೆಯ ಚುನಾವಣೆ: ವಿನಯ್‌ ಕುಮಾರ್‌ ಸೊರಕೆ

ಉದ್ಯಾವರ: ಇದು ನನ್ನ ಕೊನೆಯ ಚುನಾವಣೆ: ವಿನಯ್‌ ಕುಮಾರ್‌ ಸೊರಕೆ

- Advertisement -
- Advertisement -

ಉದ್ಯಾವರ: ಈ ವಿಧಾನಸಭಾ ಚುನಾವಣೆ ನನ್ನ ರಾಜಕೀಯ ಜೀವನದ ಕೊನೆಯ ಚುನಾವಣೆ ಎಂದು ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ ಹೇಳಿದ್ದಾರೆ.

ಉದ್ಯಾವರ ಗ್ರಾಮೀಣ ಕಾಂಗ್ರೆಸ್‌ ಸಮಿತಿಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ಕಪ್ಪುಚುಕ್ಕೆ ಬಂದಿಲ್ಲ. ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಇಂದೂ ಕೂಡಾ ಜನ ನನ್ನ ಬಳಿ ಸಮಸ್ಯೆ ಹೇಳಿಕೊಂಡು ಬರ್ತಾರೆ. ನಾನು ವೈಯಕ್ತಿಕ ಸಹಾಯವನ್ನೂ ಮಾಡುತ್ತಿದ್ದೇನೆ. ಮುಂಬರುವ ಚುನಾವಣೆ ನನ್ನ ಕೊನೆಯ ಚುನಾವಣೆ. ಮತದಾರರು ನನ್ನನ್ನು ಆಶೀರ್ವದಿಸುತ್ತಾರೆಂದು ನಂಬಿದ್ದೇನೆ ಎಂದರು.

- Advertisement -

Latest News

error: Content is protected !!