Friday, June 5, 2026
Homeಕರಾವಳಿಸುಳ್ಯ; ಸಂಪಾಜೆ ಹೈಸ್ಕೂಲ್ ಬಳಿ ಬೆಂಕಿ ಆಕಸ್ಮಿಕ

ಸುಳ್ಯ; ಸಂಪಾಜೆ ಹೈಸ್ಕೂಲ್ ಬಳಿ ಬೆಂಕಿ ಆಕಸ್ಮಿಕ

- Advertisement -
- Advertisement -

ಸುಳ್ಯ: ವಿದ್ಯುತ್ ಟ್ರಾನ್ಸ್ ಫಾರ್ಮರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿರುವ ಘಟನೆ ಸಂಪಾಜೆ ಹೈಸ್ಕೂಲ್ ಬಳಿ ನಡೆದಿದೆ.

 ಟ್ರಾನ್ಸ್ ಫಾರ್ಮರ್ ನಿಂದ ಬಿದ್ದ ಕಿಡಿ ಅಲ್ಲಿದ್ದ ಹುಲ್ಲಿನ ಪೊದೆಗೆ ತಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ  ಸಮೀಪದಲ್ಲಿದ್ದ ಕೃಷಿ ಭೂಮಿಯು ಹೊತ್ತಿ ಉರಿದಿದೆ. ಕೂಡಲೇ ಸ್ಥಳೀಯರು ಸ್ಥಳಕ್ಕಾಗಮಿಸಿ ಪರಿಶೀಲಿಸಿ, ಚೆಸ್ಕಾಂಗೆ ಮಾಹಿತಿ ನೀಡಿದ್ದಾರೆ. ಬಳಿಕ ಚೆಸ್ಕಾಂ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ.

 ಸ್ಥಳೀಯರ ಸಮಯ ಪ್ರಜ್ಞೆ ಹಾಗೂ ಚೆಸ್ಕಾಂ ಸಿಬ್ಬಂದಿಯ ಕಾರ್ಯಾಚರಣೆಯಿಂದ ಬೆಂಕಿ ನಂದಿಸುವ ಭಾರೀ ಅನಾಹುತ ತಪ್ಪಿದೆ.

- Advertisement -

Latest News

error: Content is protected !!