Sunday, June 7, 2026
Homeಕರಾವಳಿವಿಟ್ಲ; ರಾತ್ರಿ ಮಲಗಿದಲ್ಲಿಯೇ ವ್ಯಕ್ತಿ ಸಾವು, ಸಾವಿನ ಬಗ್ಗೆ ಅನುಮಾನ

ವಿಟ್ಲ; ರಾತ್ರಿ ಮಲಗಿದಲ್ಲಿಯೇ ವ್ಯಕ್ತಿ ಸಾವು, ಸಾವಿನ ಬಗ್ಗೆ ಅನುಮಾನ

- Advertisement -
- Advertisement -

ವಿಟ್ಲ: ರಾತ್ರಿ ಕೋಣೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಬೆಳಗ್ಗೆ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಅರ್ಕೆಚ್ಚಾರು ಕುಮೇರು ಎಂಬಲ್ಲಿ ನಡೆದಿದೆ. ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಮೃತ ವ್ಯಕ್ತಿ.

ಅರವಿಂದ ಭಾಸ್ಕರ ಅವರು ಫೆ.25ರಂದು ರಾತ್ರಿ 10ರರ ವೇಳೆಗೆ ಮಲಗಿದ್ದರು. ಫೆ.26ರ ಬೆಳಗ್ಗೆ 7.30ರ ನೋಡಿಗಾಗ ಅವರಿಂದ ಯಾವುದೇ ಸ್ಪಂದನೇ ಬಾರದೇ ಇದ್ದಾಗ ಅವರ ಪತ್ನಿ, ಪತ್ನಿಯ ತಂದೆ ಹಾಗೂ ಕೆಲವು ವ್ಯಕ್ತಿಗಳು ಸೇರಿಕೊಂಡು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಬಂದಿದ್ದಾರೆ. ಆಗ, ವೈದ್ಯರು ಮೃತಪಟ್ಟ ಬಗ್ಗೆ ಧೃಢಪಡಿಸಿದ್ದಾರೆ. ಈ ಬಗ್ಗೆ ಪತ್ನಿ ಆಶಾ ಅವರು ಅರವಿಂದ್‌ ಗೆಳೆಯ ಮನೋಜ್‌ಗೆ ತಿಳಿಸಿದ್ದು, ಅವರು ಬಂದು ಮೃತ ಹ ನೋಡಿ, ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದರಿಂದ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಡಿಯುವ ವಿಚಾರ ಬಿಟ್ಟರೆ ಆರೋಗ್ಯವಾಗಿದ್ದ ವ್ಯಕ್ತಿ ಏಕಾಏಕಿ ಮಲಗಿದಲ್ಲಿಯೇ ಸತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಮನೆಗೆ ವ್ಯಕ್ತಿಯೊಬ್ಬ ಬಂದು ಹೋಗುತ್ತಿದ್ದ ಎನ್ನುವ ವಿಚಾರ ಕೆಲವು ಅನುಮಾನವನ್ನು ಮೂಡಿಸಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!