Friday, July 4, 2025
Homeಕರಾವಳಿಬೆಳ್ತಂಗಡಿ : ಲಾಯಿಲ ಬಳಿ ಭಾರೀ ಬೆಂಕಿ ಅವಘಡ; ನಿಯಂತ್ರಣಕ್ಕೆ ಬಾರದ ಬೆಂಕಿ ,ಅಗ್ನಿಶಾಮಕ ಮತ್ತು...

ಬೆಳ್ತಂಗಡಿ : ಲಾಯಿಲ ಬಳಿ ಭಾರೀ ಬೆಂಕಿ ಅವಘಡ; ನಿಯಂತ್ರಣಕ್ಕೆ ಬಾರದ ಬೆಂಕಿ ,ಅಗ್ನಿಶಾಮಕ ಮತ್ತು ಸ್ಥಳೀಯರಿಂದ ನಂದಿಸಲು ಹರಸಾಹಸ

spot_img
- Advertisement -
- Advertisement -

ಬೆಳ್ತಂಗಡಿ : ದಿನದಿಂದ ದಿನೇ ಬಿಸಿಲಿನ ತಾಪ ಹೆಚ್ಚಾಗುತಿದ್ದು ಅಲ್ಲಲ್ಲಿ ಅಗ್ನಿ ಅನಾಹುತಗಳು ಸಂಭವಿಸುತ್ತಿದೆ.ಲಾಯಿಲ ಗ್ರಾಮದ ಗುರಿಂಗಾನ ಎಂಬಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ.ಲಾಯಿಲ ಗ್ರಾಮದ  ಗುರಿಂಗಾನ ಎಂಬಲ್ಲಿ ಫೆ 26 ಮಧ್ಯಾಹ್ನ ರಬ್ಬರ್ ತೋಟದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು   ಸ್ಥಳೀಯರು ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದರು.

ಅಗ್ನಿ ಶಾಮಕ ದಳ ಹಾಗೂ ಸ್ಥಳೀಯರು ನಂದಿಸುವ ಕಾರ್ಯ ಮಾಡಿದರೂ   ಬೆಂಕಿ ಅವಾಗಲೇ ಇಡೀ ಗುಡ್ಡಕ್ಕೆ ಹಬ್ಬಿದೆ ಎನ್ನಲಾಗಿದೆ.‌ ಬೆಂಕಿ ಅನಾಹುತಕ್ಕೆ ಕಾರಣ ತಿಳಿದು ಬಂದಿಲ್ಲ ಈಗಾಗಲೇ ಅಗ್ನಿಶಾಮಕ ದಳ  ಲಾಯಿಲ ಪಂಚಾಯತ್ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಶತಪ್ರಯತ್ನ ಮಾಡುತಿದ್ದಾರೆ.

ಕಳೆದ ವಾರವಷ್ಟೇ ಲಾಯಿಲ ಗ್ರಾಮದ ಪಡ್ಲಾಡಿ ಎಂಬಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಅಗ್ನಿಶಾಮಕ ಇಲಾಖೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿತ್ತು. ಸ್ಥಳೀಯರ ಸಮಯಪ್ರಜ್ಙೆಯಿಂದ ದೊಡ್ಡ ಅನಾಹುತ ತಪ್ಪಿತ್ತು.

- Advertisement -
spot_img

Latest News

error: Content is protected !!