Thursday, June 4, 2026
Homeಕರಾವಳಿಬೆಳ್ತಂಗಡಿ : ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸಿದ ಪೊಲೀಸರು: ಗ್ರಾಮಕ್ಕೆ ತೆರಳಿ ಕಾನೂನು ಪಾಠ...

ಬೆಳ್ತಂಗಡಿ : ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸಿದ ಪೊಲೀಸರು: ಗ್ರಾಮಕ್ಕೆ ತೆರಳಿ ಕಾನೂನು ಪಾಠ ಮಾಡಿದ ಖಡಕ್ ಆಫೀಸರ್ ಸತ್ಯನಾರಾಯಣ

- Advertisement -
- Advertisement -

ಬೆಳ್ತಂಗಡಿ : ಚುನಾವಣಾ ಹತ್ತಿರ ಬರುತ್ತಿದ್ದಂತೆ ಪೊಲೀಸರು ಕೂಡ ಅಲರ್ಟ್ ಆಗುತ್ತಿದ್ದು ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ದಿಡುಪೆ ಹಾಗೂ ಎಳನೀರು ಪ್ರದೇಶಗಳ ಜನರ ಬಳಿಗೆ ಹೋಗಿ ಅವರ ಸಮಸ್ಯೆ ಗಳನ್ನು ಆಲಿಸಿ ಸ್ಥಳದಲ್ಲಿಯೇ ಸಾರ್ವಜನಿಕರಿಗೆ ಕಾನೂನು ಪಾಠ ಮಾಡಿದ್ದಾರೆ ಬೆಳ್ತಂಗಡಿ ಪೊಲೀಸ್ ಠಾಣೆಯ ಖಡಕ್ ಆಫೀಸರ್ ಇನ್ಸ್ಪೆಕ್ಟರ್ ಸತ್ಯನಾರಾಯಣ.

ಬೆಳ್ತಂಗಡಿ ತಾಲೂಕಿನ ತುತ್ತ ತುದಿಯಲ್ಲಿರುವ ಸರಿಯಾದ ರಸ್ತೆ ಮಾರ್ಗವಿಲ್ಲದ ಏಳನೀರು ಪ್ರದೇಶಕ್ಕೆ ಹಾಗೂ ದಿಡುಪೆ , ಮಲವಂತಿಗೆ ಪ್ರದೇಶಗಳಿಗೆ ಬೆಳ್ತಂಗಡಿ ಪೊಲೀಸರ ತಂಡ ಭೇಟಿ ನೀಡಿದೆ.ಪೊಲೀಸ್ ಇಲಾಖೆ ಯಾವಾಗಲೂ ನಿಮ್ಮೊಂದಿಗೆ‌ ಇದೆ ಎಂದು ಹೇಳಿ ಬಳಿಕ ಜನರ ಸಮಸ್ಯೆಗಳನ್ನು ಆಲಿಸಿಕೊಂಡರು. ಚುನಾವಣಾ ಹತ್ತಿರ ಬರುತ್ತಿದ್ದು ಈಗಾಗಿ ಪರಿಸರದಲ್ಲಿ ಏನಾದರೂ ಕಾನೂನು‌ ಬಾಹಿರ ಚಟುವಟಿಕೆಗಳು ಇದ್ದಲ್ಲಿ ಕೂಡಲೆ ಇಲಾಖೆಗೆ ಹಾಗೂ ಬೀಟ್ ಸಿಬ್ಬಂದಿಯವರಿಗೆ ಮಾಹಿತಿ ನೀಡುವಂತೆ ತಿಳಿಸಿ ಜನ ಸಂಪರ್ಕ ಸಭೆಯನ್ನು ಹಾಗೂ ಬೀಟ್ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಭೆಯಲ್ಲಿ ಬೆಳ್ತಂಗಡಿ ಇನ್ಸ್ಪೆಕ್ಟರ್ ಸತ್ಯನಾರಾಯಣ,ಬೀಟ್ ಸಿಬ್ಬಂದಿ ನವೀನ್ ಕುಮಾರ್ ,ಮಲ್ತೇಶ್, ಶಶಿಕುಮಾರ್ ಮತ್ತು ಚಾಲಕ ಸತೀಶ್ ಭಾಗಿಯಾಗಿದ್ದರು.

- Advertisement -

Latest News

error: Content is protected !!