Friday, June 5, 2026
Homeಕರಾವಳಿಕೊಕ್ಕಡ: ಮಾಜಿ ಗ್ರಾ. ಪಂ ಸದಸ್ಯೆ ಸೀತಾ ಹಳ್ಳಿಂಗೇರಿ ನಿಧನ

ಕೊಕ್ಕಡ: ಮಾಜಿ ಗ್ರಾ. ಪಂ ಸದಸ್ಯೆ ಸೀತಾ ಹಳ್ಳಿಂಗೇರಿ ನಿಧನ

- Advertisement -
- Advertisement -

ಕೊಕ್ಕಡ: ಇಲ್ಲಿಯ ಹಳ್ಳಿಂಗೇರಿ ತುಳಸಿ ನಿಲಯದ ಹಳ್ಳಿಂಗೇರಿಯಲ್ಲಿ ದಿನಸಿ ಅಂಗಡಿ ಹೊಂದಿರುವ ರಾಮಣ್ಣ ಗೌಡರ ಪತ್ನಿ ಸೀತಾ(50ವ) ರವರು ಬ್ರೈನ್ ಕ್ಯೂಮರ್ ನಿಂದ ಜೂ‌.19 ರಂದು ನಿಧನರಾದರು.

ಹಿಂದೆ ಕೊಕ್ಕಡ ಗ್ರಾ.ಪಂ ಸದಸ್ಯರಾಗಿದ್ದರು. ಜೂ.18 ರಂದು ಸಂಜೆ ಇದ್ದಕಿದ್ದಂತೆ ಅಸೌಖ್ಯಕ್ಕೊಳಗಾದ ಇವರನ್ನು ನೆಲ್ಯಾಡಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು, ನಂತರ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.

ಮೃತರು ಪತಿ ರಾಮಣ್ಣ ಗೌಡ, 2 ಪುತ್ರರಾದ ದಿನಕರ ಹಾಗೂ ವಿನಯ, ಪುತ್ರಿ ಎಂಡೋಪೀಡೀತೆ ತುಳಸಿ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾರೆ.

- Advertisement -

Latest News

error: Content is protected !!