Wednesday, June 3, 2026
Homeತಾಜಾ ಸುದ್ದಿಮಾಜಿ ಪ್ರಧಾನಿ ದೇವೇಗೌಡರು ನಮಗೆಲ್ಲ ಆದರ್ಶ: ಅವರನ್ನು ನೋಡಿ ಕಲಿಯೋದು ತುಂಬಾ ಇದೆ: ಯಡಿಯೂರಪ್ಪ ವಿದಾಯ...

ಮಾಜಿ ಪ್ರಧಾನಿ ದೇವೇಗೌಡರು ನಮಗೆಲ್ಲ ಆದರ್ಶ: ಅವರನ್ನು ನೋಡಿ ಕಲಿಯೋದು ತುಂಬಾ ಇದೆ: ಯಡಿಯೂರಪ್ಪ ವಿದಾಯ ಭಾಷಣ

- Advertisement -
- Advertisement -

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ 15ನೇ ವಿಧಾನಸಭೆಯ ಕೊನೆಯ ಅಧಿವೇಶನದಲ್ಲಿ ವಿದಾಯ ಭಾಷಣ ಮಾಡಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ದೇವೇಗೌಡರನ್ನು ಯಡಿಯೂರಪ್ಪ ಹೊಗಳಿದ್ದಾರೆ.

ದೇವೇಗೌಡರನ್ನು ನೋಡಿ ಕಲಿಯೋದು ತುಂಬಾ ಇದೆ. ಅವರು ನಮಗೆಲ್ಲಾ ಆದರ್ಶ. ಇಳಿ ವಯಸ್ಸಿನಲ್ಲೂ ಸಕ್ರಿಯವಾಗಿರುವ ದೇವೇಗೌಡರ ಚಿಂತನೆಗಳು ನಮಗೆ ಆದರ್ಶ ಎಂದರು. ರಾಷ್ಟ್ರ, ರಾಜ್ಯದ ಬಗ್ಗೆ ಅವರಿಂದ ಕಲಿಯುವುದು ಬಹಳಷ್ಟಿದೆ ಎಂದರು. ಹಾಗೇ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ಗುರಿ ಹೊಂದಿದ್ದೇನೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

- Advertisement -

Latest News

error: Content is protected !!