Friday, June 5, 2026
Homeಕರಾವಳಿಮಂಗಳೂರು;ರಸ್ತೆ ದಾಟುವಾಗ ಬಸ್ ಡಿಕ್ಕಿಯಾಗಿ ವೃದ್ಧೆ ಸಾವು

ಮಂಗಳೂರು;ರಸ್ತೆ ದಾಟುವಾಗ ಬಸ್ ಡಿಕ್ಕಿಯಾಗಿ ವೃದ್ಧೆ ಸಾವು

- Advertisement -
- Advertisement -

ಮಂಗಳೂರು; ರಸ್ತೆ ದಾಟುತ್ತಿದ್ದ  ಬಸ್ ಢಿಕ್ಕಿಯಾಗಿ ವೃದ್ಧೆ ಮೃತಪಟ್ಟ ಘಟನೆ ಆಕಾಶಭವನದ ಆನಂದನಗರ ಸರ್ಕಲ್ ಸಮೀಪ ಗುರುವಾರ ಸಂಭವಿಸಿದೆ.ಆಕಾಶಭವನ ನಿವಾಸಿ  ಗೀತಾ (74 ವರ್ಷ) ಮೃತ ದುರ್ದೈವಿ.

ಬಸ್ ಚಾಲಕ ವನೀಶ್ ಎಂಬಾತ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಆಕಾಶಭವನ ಮುಖ್ಯ ರಸ್ತೆಯಲ್ಲಿ 4ನೇ ಮೈಲು ಕಡೆಯಿಂದ ಆನಂದನಗರ ಸರ್ಕಲ್ ಕಡೆಗೆ ರಸ್ತೆಯಲ್ಲಿ ಹಂಪ್ಸ್ ಇರುವ ಜಾಗದಲ್ಲಿ ಅಪಾಯಕಾರಿ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಗೀತಾ ಅವರಿಗೆ ಢಿಕ್ಕಿ ಹೊಡೆದಿದ್ದಾನೆ.ಪರಿಣಾಮ ಗೀತಾ ರಸ್ತೆ ಬಿದ್ದಿದ್ದಾರೆ. ಆಗ ಬಸ್ಸಿನ ಎದುರಿನ ಬಲ ಬದಿಯ ಚಕ್ರದಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!