Friday, June 5, 2026
Homeಕರಾವಳಿಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಬರುವ ಭಕ್ತರಿಗೆ ಧರ್ಮಸ್ಥಳ ಪೊಲೀಸರಿಂದ ವಿಶೇಷ ಜಾಗೃತಿ ಅಭಿಯಾನ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಗೆ ಬರುವ ಭಕ್ತರಿಗೆ ಧರ್ಮಸ್ಥಳ ಪೊಲೀಸರಿಂದ ವಿಶೇಷ ಜಾಗೃತಿ ಅಭಿಯಾನ

- Advertisement -
- Advertisement -

ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿ ಪ್ರಯುಕ್ತ ಸಾವಿರಾರು ಜನರು ಚಾರ್ಮಾಡಿ ಘಾಟ್ ಮೂಲಕ ಪಾದಯಾತ್ರೆ ಮಾಡಿಕೊಂಡ ಬರುತ್ತಿದ್ದಾರೆ. ಪಾದಯಾತ್ರೆ ಬರುವ ಪ್ರತಿಯೊಬ್ಬ ಭಕ್ತರಿಗೂ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿಲ್ ಕುಮಾರ್.ಡಿ ಮತ್ತು ಸಿಬ್ಬಂದಿ  ವಿಶೇಷ ಅರಿವು ಮೂಡಿಸುವ ಕಾರ್ಯಗಾರವನ್ನು ಮಾಡುತ್ತಿದ್ದಾರೆ.

ಬೆಲೆಬಾಳುವ ಚಿನ್ನಾಭರಣ , ಹಣ ಇರುವ ಬ್ಯಾಗ್ ಹಿಡಿದುಕೊಂಡು ಹೋಗುತ್ತಿರುವಾಗ ಪರಿಚಯವಿಲ್ಲದ ಅಪರಿಚಿತ ವ್ಯಕ್ತಿಗಳು ಹಿಡಿದುಕೊಳ್ಳುವ ಸಹಾಯ ನೆಪದಲ್ಲಿ ಕಳ್ಳತನ ಮಾಡುವಂತಹ ಕೃತ್ಯ ನಡೆಯುತ್ತದೆ. ಇದರ ಬಗ್ಗೆ ಗಮನಹರಿಸಬೇಕು‌. ರಸ್ತೆಯಲ್ಲಿ ಹೋಗುವಾಗ ವಾಹನಗಳ ಬಗ್ಗೆ ಗಮನಹರಿಸಿಕೊಂಡು ನಡೆದುಕೊಂಡು ಹೋಗಬೇಕು. ಪಾದಯಾತ್ರೆ ಮಾಡುವ ವೇಳೆ ನಿಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕು. ರಾತ್ರಿ ಮಲಗುವಾಗ ನಿಮ್ಮ ವಸ್ತುಗಳ ಬಗ್ಗೆ ನಿಗಾವಹಿಸಿಕೊಂಡು ನಿದ್ರಿಸಬೇಕು ಎಂದು ಚಾರ್ಮಾಡಿ ಘಾಟ್ ನಿಂದ ಧರ್ಮಸ್ಥಳದವರೆಗೂ ಧರ್ಮಸ್ಥಳ ಪೊಲೀಸರು ಅರಿವು ಮೂಡಿಸುತ್ತಿದ್ದಾರೆ.

- Advertisement -

Latest News

error: Content is protected !!