Friday, June 5, 2026
Homeಕರಾವಳಿಕಡಬ; ಗಾಂಜಾ ಸೇವಿಸಿ ಆತಂಕ ಸೃಷ್ಟಿಸಿದಾತ ಬಂಧನ

ಕಡಬ; ಗಾಂಜಾ ಸೇವಿಸಿ ಆತಂಕ ಸೃಷ್ಟಿಸಿದಾತ ಬಂಧನ

- Advertisement -
- Advertisement -

ಕಡಬ: ಗಾಂಜಾ ಸೇವಿಸಿ ತೂರಾಡುತ್ತಾ ಸಾರ್ವಜನಿಕರಲ್ಲಿ ಕೆಲ ಹೊತ್ತು ಆತಂಕ ಮೂಡಿಸಿದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಕಡಬದಲ್ಲಿ ನಡೆದಿದೆ. ಕೋಡಿಂಬಾಳ ಗ್ರಾಮದ ಕುತ್ಯಾಡಿ ನಿವಾಸಿ  ಮಿರ್ಷಾದ್ (35) ಬಂಧಿತ ಅರೋಪಿ.

ಕಡಬ   ಠಾಣಾ ಎಸ್.ಐ  ಸಿಬ್ಬಂದಿಜೊತೆಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಕಳಾರ ಎಂಬಲ್ಲಿ   ಕುಲ್ಕಿ ಜ್ಯೂಸ್‌ ಅಂಗಡಿ ಎದುರು ವ್ಯಕ್ತಿಯೋರ್ವ ರಸ್ತೆಯಲ್ಲಿ ತೂರಾಡುತ್ತಿದ್ದ. ಈ ವೇಳೆ   ವಿಚಾರಿಸಿದಾಗ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿತ್ತು

ವಿಚಾರಿಸಿದಾಗ ಗಾಂಜಾವನ್ನು ಸಿಗರೇಟ್‌ನಲ್ಲಿ ತುಂಬಿಸಿ ಸೇವಿಸಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ಆತನನ್ನು ವೈದ್ಯಕೀಯ ಪರೀಕ್ಷೇ  ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟಿದೆ. ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 14/2023 ಕಲಂ:27(B) NDPS Act-1985 ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!