Thursday, June 4, 2026
Homeತಾಜಾ ಸುದ್ದಿಮರ ಕಡಿಯಲು ವಿರೋಧ- ಚಿಪ್ಕೋ ಚಳವಳಿಯಲ್ಲಿ ಚಿತ್ರ ನಟಿಯರು

ಮರ ಕಡಿಯಲು ವಿರೋಧ- ಚಿಪ್ಕೋ ಚಳವಳಿಯಲ್ಲಿ ಚಿತ್ರ ನಟಿಯರು

- Advertisement -
- Advertisement -

ಬೆಂಗಳೂರು, ಜೂ.18 (ಹಿ.ಸ) : ನಮ್ಮ ಮೆಟ್ರೋಗಾಗಿ ಮರಗಳನ್ನು ಕಡಿಯುವುದನ್ನು ವಿರೋಧಿಸಿ ಬನ್ನೇರುಘಟ್ಟ ರಸ್ತೆಯಲ್ಲಿ ಕೆಲವು ಸಾಮಾಜಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಮ್ಮ ಮೆಟ್ರೋ 2 ನೇ ಹಂತದ ಕಾಮಗಾರಿಗಗೆ ಮರ ಕಡಿಯುವುದನ್ನು ನಿಲ್ಲಿಸಬೇಕೆಂದು ಸರ್ಕಾರ ಮತ್ತು ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ನಾಗರಿಕರು ಮರಗಳನ್ನು ತಬ್ಬಿಕೊಂಡು ಫೋಟೋ ತೆಗೆದು ಸರ್ಕಾರ ಮತ್ತು ಹೈಕೋರ್ಟ್ ಗೆ ಕಳುಹಿಸಿದ್ದಾರೆ.

ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸೋನಿಕಾ ಗೌಡ ಕೂಡ ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ಮರ ಕಡಿಯಲು ನಾವು ಬಿಡುವುದಿಲ್ಲ ಎಂದು ಘೋಷಣೆ ಕೂಗುತ್ತಿದ್ದರು.

ತಜ್ಞರ ಸಮಿತಿಯು ತನ್ನ ಕರ್ತವ್ಯವನ್ನು ಮಾಡಲು ಪದೇ ಪದೇ ವಿಫಲವಾದ ಕಾರಣ ಅದನ್ನು ರದ್ದುಗೊಳಿಸಬೇಕೆಂದು ನಾವು ಬಯಸುತ್ತೇವೆ. ಹೊಸ ಕಮಿಟಿ ರಚಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಅಧಿಕಾರಿಗಳು ಕೋರ್ಟ್ ಗೆ ದಾರಿ ತಪ್ಪಿಸುವ ವರದಿ ನೀಡಿದ್ದಾರೆ. ಬನ್ನೇರು ಘಟ್ಟದ ರಸ್ತೆ ಡೈರಿ ಸರ್ಕಲ್ ನಲ್ಲಿದ್ದ 30 ಮರಗಳ ಪೈಕಿ ಈಗಾಗಲೇ ಕಳೆದ ವಾರ 15 ಮರಗಳನ್ನು ಕತ್ತರಿಸಲಾಗಿದೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!