Wednesday, June 3, 2026
Homeತಾಜಾ ಸುದ್ದಿಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ನಕಲಿ ಪೋಸ್ಟ್

ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ನಕಲಿ ಪೋಸ್ಟ್

- Advertisement -
- Advertisement -

ಬೆಂಗಳೂರು : ಚುನಾವಣಾ ಆಯೋಗ ಇನ್ನು ಕೂಡ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡಿಲ್ಲ. ಹೀಗಿರುವಾಗಲೇ  ಸೋಷಿಯಲ್ ಮೀಡಿಯಾದಲ್ಲಿ ಚುನಾವಣಾ ವೇಳಾಪಟ್ಟಿಯ ನಕಲಿ ಪೋಸ್ಟ್ ಒಂದು ಹರಿದಾಡುತ್ತಿದೆ.

ಮೇ. 12 ರಂದು ಮತದಾನ ನಡೆಯಲಿದ್ದು, ಮೇ. 15 ಕ್ಕೆ ಮತ ಎಣಿಕೆ ನಡೆಯಲಿದೆ ಎಂಬ ನಕಲಿ ಪೋಸ್ಟ್ ಒಂದನ್ನು ಯಾರೋ ಕಿಡಿಗೇಡಿಗಳು ಹರಿ ಬಿಟ್ಟಿದ್ದಾರೆ. ಹಾಲಿ ಸರಕಾರದ ಅಧಿಕಾರಾವಧಿ ಮೇ. 23 ಕ್ಕೆ ಅಂತ್ಯವಾಗಲಿದೆ. ಈವರೆಗೆ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿಲ್ಲ. ಹೀಗಿರುವಾಗ ಮೇ. 12 ರಂದು ಮತದಾನ ನಡೆಯಲಿದ್ದು, ಮೇ. 15 ರಂದು ಮತ ಎಣಿಕೆ ನಡೆಯಲಿದೆ ಎಂಬ ನಕಲಿ ವೇಳಾಪಟ್ಟಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ಇದನ್ನೇ ಕೆಲವರು ಸರಿಯಾಗಿ ಪರಿಶೀಲಿಸದೇ ಶೇರ್ ಮಾಡುತ್ತಿದ್ದು ಜನರನ್ನು ಮತ್ತಷ್ಟು ಗೊಂದಲಕ್ಕೆ ತಳ್ಳುತ್ತಿದ್ದಾರೆ

- Advertisement -

Latest News

error: Content is protected !!