Friday, April 26, 2024
Homeತಾಜಾ ಸುದ್ದಿಕಾಂತಾರ ಪಾರ್ಟ್ -2 ಬರುತ್ತಾ ಎಂದು ಕೇಳುತ್ತಿದ್ದವರಿಗೆ ರಿಷಭ್ ಶೆಟ್ಟಿ ಕೊಟ್ರು ಚಮಕ್...

ಕಾಂತಾರ ಪಾರ್ಟ್ -2 ಬರುತ್ತಾ ಎಂದು ಕೇಳುತ್ತಿದ್ದವರಿಗೆ ರಿಷಭ್ ಶೆಟ್ಟಿ ಕೊಟ್ರು ಚಮಕ್…

spot_img
- Advertisement -
- Advertisement -

ಬೆಂಗಳೂರು; ಕಾಂತಾರ ಸಿನಿಮಾ ಶತ ದಿನದ ಸಂಭ್ರಮದಲ್ಲಿದೆ. ಹೀಗಿರುವಾಗಲೇ ಈ ಸಿನಿಮಾದ ಬಗ್ಗೆ ದಿನಕ್ಕೊಂದು ರೀತಿಯ ಮಾತುಗಳು ಕೇಳಿ ಬರುತ್ತಲೇ ಇದೆ. ಕಾಂತಾರ  ಪಾರ್ಟ್-2 ಬರುತ್ತೆ ಬರಲ್ಲಾ ಹೀಗೆ ದಿನಕ್ಕೊಂದು ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ನಟ , ನಿರ್ದೇಶಕ ರಿಷಭ್ ಶೆಟ್ಟಿ ಎಲ್ಲರಿಗೂ ಚಮಕ್ ಕೊಟ್ಟಿದ್ದಾರೆ.

ಇತ್ತೀಚೆಗೆ ಕಾಂತಾರ  ಸಿನಿಮಾದ ಶತದಿನೋತ್ಸವ ಸಮಾರಂಭ ಬೆಂಗಳೂರಿನ ಬಂಟರ ಸಂಘದಲ್ಲಿ ಅದ್ದೂರಿಯಾಗಿ ಆಚರಿಸಲಾಗಿತ್ತು. ಈ ವೇಳೆ ಮಾತನಾಡುತ್ತಾ ಸಿನಿಮಾದ ಪಾರ್ಟ್ ಬರುತ್ತಾ ಎಂಬ ಬಗ್ಗೆ ರಿಷಭ್  ಬಾಯ್ಬಿಟ್ಟಿದ್ದಾರೆ.

ಯೆಸ್.. ಕಾಂತಾರ ಭಾಗ 2  ಯಾವಾಗ ಎಂದು ಎಲ್ಲರೂ ಕೇಳುತ್ತಿದ್ದಾರೆ. ನೀವು ನೋಡಿರುವುದೇ ಎರಡನೇ ಪಾರ್ಟ್​. ಮುಂದೆ ಬರೋದು ಈ ಚಿತ್ರದ ಮೊದಲ ಭಾಗ ಎಂದು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ ರಿಷಬ್ ಶೆಟ್ಟಿ. ಹಾಗಾಗಿ ಅಭಿಮಾನಿಗಳ ಕುತೂಹಲ ಇದೀಗ ಇನ್ನಷ್ಟು ಜಾಸ್ತಿಯಾಗಿದೆ.

- Advertisement -
spot_img

Latest News

error: Content is protected !!