Friday, June 5, 2026
Homeಕರಾವಳಿಉಡುಪಿಹಿಂದೂ ದೇವಾಲಯಗಳನ್ನು ರಕ್ಷಿಸಲು ಆಸ್ಟ್ರೇಲಿಯಾದ ಸಚಿವರ ಬಳಿ ಪುತ್ತಿಗೆ ಶ್ರೀಪಾದರಿಂದ ಮನವಿ

ಹಿಂದೂ ದೇವಾಲಯಗಳನ್ನು ರಕ್ಷಿಸಲು ಆಸ್ಟ್ರೇಲಿಯಾದ ಸಚಿವರ ಬಳಿ ಪುತ್ತಿಗೆ ಶ್ರೀಪಾದರಿಂದ ಮನವಿ

- Advertisement -
- Advertisement -

ಉಡುಪಿ : ವಿಶ್ವ ಪರ್ಯಾಯ ಸಂಚಾರದಲ್ಲಿರುವ ಭಾವಿ ಪರ್ಯಾಯ ಮಠಾಧೀಶರಾದ ಪೂಜ್ಯ ಪುತ್ತಿಗೆ ಶ್ರೀಪಾದರನ್ನು ಆಸ್ಟ್ರೇಲಿಯಾ ಅನಿವಾಸಿ ವಲಸೆ ಸಚಿವರಾದ ಆಂಡ್ರೂ ಗೈಲ್ಸ್ ಇವರು ತಮ್ಮ ನಿವಾಸಕ್ಕೆ ಕರೆಯಿಸಿ ಆಶೀರ್ವಾದ ಪಡೆದುಕೊಂಡರು 

 ಸಂದರ್ಭದಲ್ಲಿ ಪೂಜ್ಯ ಶ್ರೀಪಾದರು ಇತ್ತೀಚಿಗೆ ಹಿಂದೂ ದೇವಾಲಯಗಳನ್ನು ಗುರಿಯಾಗಿರಿಸಿ ಆಕ್ರಮಣ ಮಾಡಿ ಹಾನಿ ಮಾಡಿರುವ ಬಗ್ಗೆ ಶೀಘ್ರ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು . ಮಾನ್ಯ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆಯಿತ್ತು ಶ್ರೀಗಳ ಸಲಹೆಯನ್ನು ಪಡೆದುಕೊಂಡರು.

ಭಾರತೀಯರಿಗೆ ವೀಸಾ ಕಾರ್ಯಗಳ ಶೀಘ್ರ ವಿಲೇವಾರಿ ಬಗ್ಗೆಯೂ ಪ್ರಸ್ತಾವಿಸಲಾಯಿತು . ಸಚಿವರು ಈ ಬಗ್ಗ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆಯಿತ್ತರು. ಪೂಜ್ಯ ಶ್ರೀಪಾದರು ಮುಂಬರುವ ತಮ್ಮ ಪರ್ಯಾಯಕ್ಕೆ ಪ್ರೀತಿಯಿಂದ ಆಹ್ವಾನಿಸಿದರು .ಸಚಿವರು ತಮ್ಮ ಮಾತಿನಲ್ಲಿ ಶ್ರೀಪಾದರ ಕೋಟಿಗೀತಾ ಲೇಖನ ಯಜ್ಞದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು . ಪೂಜ್ಯ ಶ್ರೀಪಾದರು ವಿಶ್ವಬ್ರಾತೃತ್ವ ವನ್ನು ಸಾರುವ ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು .

- Advertisement -

Latest News

error: Content is protected !!