ಸುಳ್ಯ: ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಮೇಶ್ .ಬಿ ಅವರಿಗೆ ಹೆಡ್ ಕಾನ್ಸಸ್ಟೇಬಲ್ ಆಗಿ ಮುಂಭಡ್ತಿ ದೊರೆತು ಪುತ್ತೂರು ಮಹಿಳಾ ಠಾಣೆಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯಲ್ಲಿ ಬೀಳ್ಕೋಡುಗೆ ಸಮಾರಂಭ ನಡೆಯಿತು.
ಪಿ.ಎಸ್.ಐ ಹರೀಶ್ ಕುಮಾರ್, ಕ್ರೈಮ್ ಎಸ್.ಐ ರತನ್ ಕುಮಾರ್ ಅವರು ರಮೇಶ್ ರನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಎ.ಎಸ್.ಐ ಶಿವರಾಮ್, ದೇವರಾಜ್, ಹೆಡ್ ಕಾನ್ಸಸ್ಟೇಬಲ್ ಗಂಗಾಧರ, ಮಹೇಶ್, ಉದಯ, ಠಾಣೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರ್ಗಾವಣೆಯಾಗುತ್ತಿರುವ ರಮೇಶ್ ಈ ಮೊದಲು, ಅಬಕಾರಿ ಲಾಟರಿ ಸ್ಕ್ವಾಡ್ ದಳ, ಬಂದರು ಪೊಲೀಸ್ ಠಾಣೆ ( ಮಂಗಳೂರು ಉತ್ತರ), ವಿಟ್ಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಅಲ್ಲಿಂದ ವರ್ಗಾವಣೆಗೊಂಡು ಸುಳ್ಯ ಠಾಣೆಗೆ ಬಂದಿದ್ದರು.
ರಮೇಶ್ ಕಡಬ ತಾಲೂಕು ಇಂಚಿಲಪಾಡಿ ಶೂರಪ್ಪ ಗೌಡ ವಾರಿಜ ದಂಪತಿ ಪುತ್ರ. ಪತ್ನಿ ಅಕ್ಷತಾ ಸುಳ್ಯ ಕೆ.ವಿ.ಜಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕಿಯಾಗಿದ್ದು, ಮಕ್ಕಳಾದ ಮಾನಿತ್ವ ಹಾಗೂ ಪ್ರಣವಿಯೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.