Monday, June 8, 2026
Homeಕರಾವಳಿಬೆಳ್ತಂಗಡಿ: ರಕ್ಷಿತ್ ಶಿವರಾಂ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ: ಮಾಜಿ ಶಾಸಕ ವಸಂತ...

ಬೆಳ್ತಂಗಡಿ: ರಕ್ಷಿತ್ ಶಿವರಾಂ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ: ಮಾಜಿ ಶಾಸಕ ವಸಂತ ಬಂಗೇರ

- Advertisement -
- Advertisement -

ಬೆಳ್ತಂಗಡಿ: ರಕ್ಷಿತ್ ಶಿವರಾಂ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ನನ್ನ ಬೆಂಬಲ ಇಲ್ಲ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದ್ದಾರೆ.

ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ರಕ್ಷಿತ್‌ ಶಿವರಾಂ ನೇತೃತ್ವದಲ್ಲಿ ನಡೆಯುವ ಹೋರಾಟ ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ನೇತ್ರಾವತಿ ಉಳಿಸಿ ಭ್ರಷ್ಟಾಚಾರ ನಿಲ್ಲಿಸಿ ಹಾಗೂ ವಿವಿಧ ವಿಚಾರಗಳ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥ ಜ 08 ರಂದು ಮುಂಡಾಜೆಯಿಂದ ಉಪ್ಪಿನಂಗಡಿಯವರೆಗೆ ಹಾಗೂ ಬೆಳ್ತಂಗಡಿಯಲ್ಲಿ ಹಕ್ಕೊತ್ತಾಯ ಸಭೆಯು ನಡೆಯಲಿದ್ದು ಈ ಬಗ್ಗೆ ತಾಲೂಕಿನಾದ್ಯಂತ ಪೂರ್ವಭಾವಿ ಸಭೆಗಳು ನಡೆಯುತಿದೆ . ಈ ಕಾರ್ಯಕ್ರಮದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕಾಗಲಿ ನನಗಾಗಲಿ ಯಾವುದೇ ಮಾಹಿತಿ ಇಲ್ಲ. ಜ 07 ರಂದು ನಡೆಯುವ ಪ್ರತಿಭಟನೆ ಪಕ್ಷದ ಅಧಿಕೃತ ಕಾರ್ಯಕ್ರಮವಾಗಿದ್ದು ಜ 08 ರಂದು ನಡೆಯುವ ಜಾಥಾ ಅವರ ವೈಯಕ್ತಿಕ ಕಾರ್ಯಕ್ರಮವಾಗಿರಬಹುದು. ಆದ್ದರಿಂದ ಅದಕ್ಕೆ ಬೆಂಬಲ ಇಲ್ಲ ಎಂದು ಗೊಂದಲಕಾರಿ ಹೇಳಿಕೆ ನೀಡಿದ್ದಾರೆ.

- Advertisement -

Latest News

error: Content is protected !!