Friday, June 5, 2026
Homeಕರಾವಳಿಬಂಟ್ವಾಳ; ಅಯ್ಯಪ್ಪ ವೃತದಾರಿಯನ್ನು ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪ; ದೂರು ದಾಖಲು

ಬಂಟ್ವಾಳ; ಅಯ್ಯಪ್ಪ ವೃತದಾರಿಯನ್ನು ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪ; ದೂರು ದಾಖಲು

- Advertisement -
- Advertisement -

ಬಂಟ್ವಾಳ; ಪಾರ್ಸೆಲ್ ನೀಡಲು ಬಂದಿದ್ದ ಅಯ್ಯಪ್ಪ ವೃತದಾರಿಗಳಿಗೆ ಅವ್ಯಾಚ್ಚ ಶಬ್ದಗಳಿಂದ ಬೈದು, ಜೀವಬೆದರಿಕೆ ಹಾಕಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಿ.ಮೂಡ ಗ್ರಾಮದ ಗೂಡಿನಬಳಿ ನಿವಾಸಿ, ಮೀನು ವ್ಯಾಪಾರಿ ಇಕ್ಬಾಲ್ ಎಂಬಾತನ ಮೇಲೆ ನಗರ ಪೊಲೀಸ್ ‌ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲಿಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಯಶ್ವಿತ್ ಎಂಬವರು ಅಯ್ಯಪ್ಪ ಮಾಲಾಧಾರಿಯಾಗಿದ್ದು, ಅವರು ಸ್ನೇಹಿತನ ಜೊತೆ ರಿಕ್ಷಾ ಟೆಂಪೋದಲ್ಲಿ ಪಾರ್ಸೆಲ್ ಸರ್ವೀಸ್ ಮಾಡುವ ಸಂದರ್ಭದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ಗೂಡಿನ ಬಳಿ ಸಮೀಪ ಪಾರ್ಸೆಲ್ ಒಂದನ್ನು ನೀಡಲು ತೆರಳಿದ ವೇಳೆ ಆರೋಪಿ ಇಕ್ಬಾಲ್ ಇದು ನಮ್ಮ ಏರಿಯಾ, ಈ ಭಾಗಕ್ಕೆ ಹಿಂದೂಗಳು ಬರಬಾರದು ಎಂಬ ಮಾತನ್ನು ಹೇಳಿದ್ದಲ್ಲದೆ. ಅಯ್ಯಪ್ಪ ವೃತದಾರಿಗಳನ್ನು ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!