Monday, June 8, 2026
Homeಕರಾವಳಿಬೆಳ್ತಂಗಡಿ : ಪೊಲೀಸ್ ಉಪವಿಭಾಗ ಮಾಡಿ ಸರಕಾರದಿಂದ ಅಧಿಕೃತ ಆದೇಶ

ಬೆಳ್ತಂಗಡಿ : ಪೊಲೀಸ್ ಉಪವಿಭಾಗ ಮಾಡಿ ಸರಕಾರದಿಂದ ಅಧಿಕೃತ ಆದೇಶ

- Advertisement -
- Advertisement -

ಬೆಳ್ತಂಗಡಿ : ವಿವಿಧ ಜಿಲ್ಲೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ಉಪವಿಭಾಗ ಮತ್ತು ಪಿಐ ಪೊಲೀಸ್ ಠಾಣೆ ಮಾಡಲು ಪೊಲೀಸ್ ಇಲಾಖೆಯೂ ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತ್ತು ಇದೀಗ ಆ ಪ್ರಸಾರವಾನೆಗೆ ರಾಜ್ಯ ಸರಕಾರ ಪ್ರಸ್ತಾವನೆಗಳನ್ನು ಎಲ್ಲಾ ಆಯಾಮಗಳಲ್ಲಿ ಪರಿಶೀಲನೆ ನಡೆಸಿ ಇದೀಗ ಅಧಿಕೃತ ಆದೇಶವನ್ನು ಪೊಲೀಸ್ ಇಲಾಖೆಗೆ ಹೊರಡಿಸಿದೆ. ಅದರಂತೆ ಬೆಳ್ತಂಗಡಿಗೆ ಉಪವಿಭಾಗ ಹಾಗೂ ಎರಡು ಪಿಐ ಪೊಲೀಸ್ ಠಾಣೆಯನ್ನು ಮಾಡಲು ಆದೇಶ ಹೊರಡಿಸಿದೆ.

ಬೆಳ್ತಂಗಡಿಯ ಐದು ಪೊಲೀಸ್ ಠಾಣೆಗೆ ಒಂದು ಹೊಸ ಉಪವಿಭಾಗ ಪೊಲೀಸ್ ಠಾಣೆ (DYSP ಅಥವಾ ASP ಕಚೇರಿ) ಸ್ಥಾಪನೆಯಾಗಲಿದೆ. ಬೆಳ್ತಂಗಡಿ ಪೊಲೀಸ್ ಠಾಣೆ ಮತ್ತು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಗೆ (ಪಿಐ) ಇನ್ಸ್ಪೆಕ್ಟರ್ ದರ್ಜೆಯ ಪೊಲೀಸ್ ಠಾಣೆಯಾಗಲಿದ್ದು ಹಾಗೂ ವೇಣೂರು ಪೊಲೀಸ್ ಠಾಣೆ, ಪುಂಜಾಲಕಟ್ಟೆ ಪೊಲೀಸ್ ಠಾಣೆ , ಧರ್ಮಸ್ಥಳ ಪೊಲೀಸ್ ಠಾಣೆಯನ್ನು ಒಳಗೊಂಡ ಸರ್ಕಲ್ ಇನ್ಸ್ಪೆಕ್ಟರ್ ಪೊಲೀಸ್ ಠಾಣೆಯಾಗಲಿದೆ. ಇನ್ನೂ ಬೆಳ್ತಂಗಡಿಗೆ ಓರ್ವ ಡಿವೈಎಸ್ಪಿ ಮತ್ತು ಓರ್ವ ಇನ್ಸ್ಪೆಕ್ಟರ್ (ಪಿಐ) ಶ್ರೀಘ್ರದಲ್ಲಿ ನೇಮಕಗೊಳ್ಳಲಿದ್ದಾರೆ.ಇದು 2023 ಇಸವಿಯ ಹೊಸ ವರ್ಷದ ಮೊದಲ ತಿಂಗಳಲ್ಲಿ ಬದಲಾವಣೆಯನ್ನು ಪೊಲೀಸ್ ಇಲಾಖೆ ಮಾಡಲಿದೆ.

- Advertisement -

Latest News

error: Content is protected !!