Thursday, June 4, 2026
Homeತಾಜಾ ಸುದ್ದಿಕೋವಿಡ್‌ ಬಗ್ಗೆ ಗಾಬರಿಯಾಗೋದು ಬೇಡ: ಸದ್ಯಕ್ಕೆ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ: ಆರ್.‌ ಅಶೋಕ್‌

ಕೋವಿಡ್‌ ಬಗ್ಗೆ ಗಾಬರಿಯಾಗೋದು ಬೇಡ: ಸದ್ಯಕ್ಕೆ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ: ಆರ್.‌ ಅಶೋಕ್‌

- Advertisement -
- Advertisement -

ಬೆಳಗಾವಿ: ಕೋವಿಡ್‌ ಭೀತಿ ಮತ್ತೆ ಎದುರಾಗಿದ್ದು ಜನ ಆತಂಕದಲ್ಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕಂದಾಯ ಸಚಿವ ಆರ್.‌ ಅಶೋಕ್‌, ಕೋವಿಡ್‌ನಿಂದ ಯಾರೂ ಕೂಡ ಪ್ಯಾನಿಕ್ ಆಗೋದು ಬೇಡ. ಸದ್ಯಕ್ಕೆ ಯಾವುದೇ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ. ಜನ ಸಹಕಾರ ನೀಡಿದ್ರೆ ಕೋವಿಡ್ ತಡೆಯಬಹುದು ಎಂದಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಿನ್ನೆಲೆ ನಾನು, ಸುಧಾಕರ್ ಸಭೆ ಮಾಡುತ್ತಿದ್ದೇವೆ. ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಭೆ ಮಾಡುತ್ತಿದ್ದೇವೆ. ಯಾರೂ ಕೂಡ ಪ್ಯಾನಿಕ್ ಆಗೋದು ಬೇಡ. ಸದ್ಯಕ್ಕೆ ಯಾವುದೇ ರೀತಿಯ ಕಟ್ಟುನಿಟ್ಟಿನ ನಿರ್ಬಂಧ ಇರಲ್ಲ ಎಂದು ಸ್ಪಷ್ಟಪಡಿಸಿದರು.

- Advertisement -

Latest News

error: Content is protected !!