Thursday, June 4, 2026
Homeಕರಾವಳಿಸುಳ್ಯ: ಉದ್ಯಮಿ ನವೀನ್ ಅಪಹರಣ ಪ್ರಕರಣ: ನವೀನ್ ಅವರನ್ನು ತಾಯಿ ವಶಕ್ಕೆ ನೀಡಿದ ಹೈಕೋರ್ಟ್

ಸುಳ್ಯ: ಉದ್ಯಮಿ ನವೀನ್ ಅಪಹರಣ ಪ್ರಕರಣ: ನವೀನ್ ಅವರನ್ನು ತಾಯಿ ವಶಕ್ಕೆ ನೀಡಿದ ಹೈಕೋರ್ಟ್

- Advertisement -
- Advertisement -

ಸುಳ್ಯ: ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲೀಕ ನವೀನ್ ಕಾಮಧೇನುರನ್ನು ಅವರ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ತಾಯಿ ನೀರಜಾಕ್ಷಿಯವರಿಂದ ಹೈಕೋರ್ಟ್ ಗೆ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ನವೀನರನ್ನು ತಾಯಿಯ ವಶಕ್ಕೆ ಒಪ್ಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಂದ ನವೀನ್ ಕುರಿತಂತೆ ಹೈಕೋರ್ಟ್ ವರದಿ ಕೇಳಿದ್ದು, ನವೀನ್ ರನ್ನು ಆಸ್ಪತ್ರೆಗೆ ದಾಖಲುಗೊಳಿಸಿರುವುದಾಗಿ ಪೋಲೀಸರಿಂದ ಹೈಕೋರ್ಟಿಗೆ ವರದಿ ಸಲ್ಲಿಕೆಯಾಗಿತ್ತು. ಇದರ ಬೆನ್ನಲ್ಲೇ ನವೀನರನ್ನು ದಾಖಲಿಸಲಾದ ಆಸ್ಪತ್ರೆಗೆ ನ್ಯಾಯಾಲಯವು ವಕೀಲರನ್ನು ಕಳುಹಿಸಿದೆ. ವಕೀಲರು ನವೀನರ ಹೇಳಿಕೆ ಪಡೆದಿದ್ದು, ವಕೀಲರ ವರದಿಯಂತೆ ನವೀನರನ್ನು ತಾಯಿ ನೀರಜಾಕ್ಷಿಯವರ ವಶಕ್ಕೊಪ್ಪಿಸಲು ಹೈಕೋರ್ಟ್ ಸೂಚಿಸಿರುವುದಾಗಿ ತಿಳಿದುಬಂದಿದೆ.

ನವೀನ್ ರನ್ನು ತಾಯಿಯ ವಶಕ್ಕೆ ನ್ಯಾಯಾಲಯವು ಒಪ್ಪಿಸಲು ಆದೇಶಿಸಿದ್ದರೂ ಡಿ. 27 ರ ಮಂಗಳವಾರದವರೆಗೆ ಬೆಂಗಳೂರಿನಲ್ಲೆ ಇರುವಂತೆ ಆದೇಶ ನೀಡಿದೆ.

- Advertisement -

Latest News

error: Content is protected !!