Friday, May 17, 2024
Homeಕರಾವಳಿಧರ್ಮಸ್ಥಳ : ರೋಗಿಗಳ ಬಳಿ ಇದ್ದ ಚಿನ್ನ ಕದ್ದ ಪ್ರಕರಣ; ಬೆಳ್ತಂಗಡಿ ಕೋರ್ಟ್ ನಿಂದ ಆರೋಪಿಗೆ...

ಧರ್ಮಸ್ಥಳ : ರೋಗಿಗಳ ಬಳಿ ಇದ್ದ ಚಿನ್ನ ಕದ್ದ ಪ್ರಕರಣ; ಬೆಳ್ತಂಗಡಿ ಕೋರ್ಟ್ ನಿಂದ ಆರೋಪಿಗೆ ಜಾಮೀನು ಮಂಜೂರು

spot_img
- Advertisement -
- Advertisement -

ಬೆಳ್ತಂಗಡಿ : ರೋಗಿಗಳ ಸೋಗಿನಲ್ಲಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಾ ಚಿನ್ನಾಭರಣ ಕದ್ದು ಸಿಲಿಕಾನ್ ಸಿಟಿ ಸೇರಿದ್ದ ಕಳ್ಳಿಗೆ ಬೆಳ್ತಂಗಡಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗ ಚಿಕಿತ್ಸಾಲಯ ಶಾಂತಿವನ ಆಸ್ಪತ್ರೆಗೆ ಚಿಕಿತ್ಸೆಗೆಂದು ಬೆಂಗಳೂರಿನ ಶ್ರೀಮತಿ ಹೇಮಾ ಕುಟುಂಬದೊಂದಿಗೆ 30-06-2022 ರಂದು ಬಂದಿದ್ದು ಇವರ ಬಳಿ ಇದ್ದ 80 ಗ್ರಾಂ ತೂಕದ ಎರಡು ಹವಳದ ಚಿನ್ನದ ಮಾಂಗಲ್ಯ ಸರ ಹಾಗೂ 6000/- ರೂಪಾಯಿ ನಗದು ಇದ್ದ ವ್ಯಾನಿಟಿ ಬ್ಯಾಗನ್ನು ಚಿಕಿತ್ಸೆಗೆ ಹೋಗಿದ್ದ ವೇಳೆಯಲ್ಲಿ ಕಳ್ಳತನ ಮಾಡಿದ್ದ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಕಾರ್ಯಾಚರಣೆ ನಡೆಸಿ ಕಳ್ಳತನ ಮಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮದ ನಿವಾಸಿ ಆರೋಪಿ ಯುವತಿ ವರ್ಷಾ(26) ಯನ್ನು ಬೆಂಗಳೂರಿನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದು ವಿಶೇಷ ಕರ್ತವ್ಯದಲ್ಲಿ ತೆರಳಿ ಬಂಧಿಸಿ ಕಳ್ಳತನ ಮಾಡಿದ್ದ ಚಿನ್ನಾಭರಣವನ್ನು ವಶಪಡಿಸಿಕೊಳ್ಳುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದರು.

ಆರೋಪಿ ವರ್ಷಳನ್ನು ಬಂಧಿಸಿ ಧರ್ಮಸ್ಥಳ ಪೊಲೀಸರು ಡಿ.15 ರಂದು ಸಂಜೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ಮಧ್ಯೆ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಡಿ.17 ರಂದು ಆರೋಪಿಗೆ ಜಾಮೀನು ಮಂಜೂರು ಮಾಡಲು ಅರ್ಜಿ ಸಲ್ಲಿಸಿದ್ದು ಸಂಜೆ ಜಡ್ಜ್ ವಿಜಯೇಂದ್ರ.ಟಿ.ಹೆಚ್ ಜಾಮೀನು ಮಂಜೂರು ಮಾಡಿದ್ದಾರೆ.

ಆರೋಪಿ ಯುವತಿ ವರ್ಷಾ ಪರ ಬೆಳ್ತಂಗಡಿಯ ಯುವ ವಕೀಲರಾದ ನವೀನ್.ಬಿ.ಕೆ ಮತ್ತು ಆನಂದ್ ಕುಮಾರ್.ಎಂ.ಸಿ ವಾದ ಮಂಡಿಸಿದ್ದರು.

- Advertisement -
spot_img

Latest News

error: Content is protected !!