Friday, June 5, 2026
Homeಕರಾವಳಿಮಂಗಳೂರು; ಶೌಚಾಲಯದ ಗುಂಡಿ ತೋಡುವಾಗ ಮಣ್ಣು ಕುಸಿದು ಓರ್ವ ಸಾವು, ಇಬ್ಬರಿಗೆ ಗಾಯ

ಮಂಗಳೂರು; ಶೌಚಾಲಯದ ಗುಂಡಿ ತೋಡುವಾಗ ಮಣ್ಣು ಕುಸಿದು ಓರ್ವ ಸಾವು, ಇಬ್ಬರಿಗೆ ಗಾಯ

- Advertisement -
- Advertisement -

ಮಂಗಳೂರು: ಶೌಚಾಲಯದ ಗುಂಡಿ ತೋಡುವ ವೇಳೆ ಮಣ್ಣು ಕುಸಿದು  ವ್ಯಕ್ತಿಯೋರ್ವರು ಮೃತಪಟ್ಟು ಇಬ್ಬರು  ಗಾಯಗೊಂಡಿರುವ ಘಟನೆ ಅಡ್ಡೂರಿನಲ್ಲಿ ನಡೆದಿದೆ.

ಆದಂ (55) ಮೃತ ದುರ್ದೈವಿ. ಆದಂ ಅವರು ಇನ್ನಿಬ್ಬರ ಜೊತೆ ಸ್ಥಳೀಯ ನಿವಾಸಿ ಆರೀಫ್ ಎಂಬವರ ಮನೆಯಲ್ಲಿ ಶೌಚಾಲಯಕ್ಕೆ ಗುಂಡಿ ತೋಡುವ ವೇಳೆ ಆಕಸ್ಮಿಕವಾಗಿ ಮಣ್ಣು ಕುಸಿದು ಬಿದ್ದಿದೆ ಎನ್ನಲಾಗಿದೆ.

ಘಟನೆಯಲ್ಲಿ ಆದಂ ಅವರು ಮಣ್ಣಿನಡಿಗೆ ಬಿದ್ದು ಗಂಭೀರವಾಗಿ ಮೃತಪಟ್ಟರೆ, ಇನ್ನಿಬ್ಬರು ಗಾಯಗೊಂಡಿದ್ದಾರೆ.ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ‌ ಕೇಸ್ ದಾಖಲಾಗಿದೆ.

- Advertisement -

Latest News

error: Content is protected !!