Saturday, June 6, 2026
Homeಕರಾವಳಿವಿಟ್ಲ; ಅನ್ಯಕೋಮಿನ ವಿದ್ಯಾರ್ಥಿಗೆ ಪ್ರೇಮ ಪತ್ರ ಬರೆದ ವಿದ್ಯಾರ್ಥಿನಿ; ಪ್ರಶ್ನಿಸಿದ 10 ಮಂದಿ ವಿದ್ಯಾರ್ಥಿಗಳು ಡಿಬಾರ್     

ವಿಟ್ಲ; ಅನ್ಯಕೋಮಿನ ವಿದ್ಯಾರ್ಥಿಗೆ ಪ್ರೇಮ ಪತ್ರ ಬರೆದ ವಿದ್ಯಾರ್ಥಿನಿ; ಪ್ರಶ್ನಿಸಿದ 10 ಮಂದಿ ವಿದ್ಯಾರ್ಥಿಗಳು ಡಿಬಾರ್     

- Advertisement -
- Advertisement -

ವಿಟ್ಲ; ಅನ್ಯಕೋಮಿನ ವಿದ್ಯಾರ್ಥಿಗೆ ವಿದ್ಯಾರ್ಥಿನಿ ಪ್ರೇಮ ಪತ್ರ ಬರೆದ್ದನ್ನು ಪ್ರಶ್ನಿಸಿದ 10 ಮಂದಿ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ಅಮಾನತು ಮಾಡಿರುವ ಘಟನೆ ವಿಟ್ಲದಲ್ಲಿ ನಡೆದಿದೆ.

ದ್ವಿತೀಯ ಪಿಯುಸಿಲ್ಲಿ ಓದುತ್ತಿದ್ದ ಕೇಪು ಮೂಲದ ವಿದ್ಯಾರ್ಥಿನಿ, ಕೆಲಿಂಜ ಮೂಲದ ಮುಸ್ಲಿಂ ವಿದ್ಯಾರ್ಥಿಗೆ ಪೇಮಪತ್ರ ಬರೆದಿದ್ದಳು ಎನ್ನಲಾಗಿದೆ.ಇದನ್ನು ತಿಳಿದು ಎರಡೂ ಕೋಮಿನ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಗೊಂದಲದ ವಾತಾವರಣ ನಿರ್ಮಿಸಿದ್ದರು ಎನ್ನಲಾಗಿದೆ.ಇದರಿಂದ ಪ್ರಾಂಶುಪಾಲರು ಶಿಸ್ತು ಕ್ರಮದ ಭಾಗವಾಗಿ ಎರಡೂ ಕಡೆಯ 10 ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿ ಆದೇಶ ನೀಡಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮಾತ್ರ ಬರುವಂತೆ ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಪ್ರಾಶುಂಪಾಲರ ದಿಟ್ಟ ನಿರ್ಧಾರವನ್ನು ಹಲವರು ಪ್ರಶಂಸಿಸಿದ್ದಾರೆ.

ಪ್ರಾಂಶುಪಾಲರು ವಿದ್ಯಾರ್ಥಿಗಳನ್ನು ಡಿಬಾರ್ ಮಾಡಿರುವ ವಿಚಾರವನ್ನು ಕೆಲ ಸಂಘಟನೆಗಳು ಖಂಡಿಸಿದ್ದು, ವಿದ್ಯಾರ್ಥಿಗಳ ಡಿಬಾರ್ ನ್ನು ರದ್ದುಗೊಳಿಸುವಂತೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!