Friday, August 28, 2026
Homeಕರಾವಳಿಮಂಗಳೂರು:ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಯಲು ಯತ್ನಿಸಿ ರಿಕ್ಷಾ ಚಾಲಕ ಪರಾರಿ

ಮಂಗಳೂರು:ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆಯಲು ಯತ್ನಿಸಿ ರಿಕ್ಷಾ ಚಾಲಕ ಪರಾರಿ

- Advertisement -
- Advertisement -

ಮಂಗಳೂರು:ಆಟೋ ರಿಕ್ಷಾ ಚಾಲಕನೋರ್ವ ಪೊಲೀಸ್ ವಾಹನಕ್ಕೆ ಢಿಕ್ಕಿ ಹೊಡೆಯಲು ಯತ್ನಿಸಿ ಪರಾರಿಯಾದ ಘಟನೆ ಮಂಗಳೂರಿನ ಪಂಪ್‌ವೆಲ್‌ ಚೆಕ್‌ ಪಾಯಿಂಟ್‌ನಲ್ಲಿ ನಡೆದಿದೆ.

ಮಂಗಳೂರು ಸಂಚಾರಿ ದಕ್ಷಿಣ ಪೊಲೀಸ್‌ ಠಾಣೆ ಪೊಲೀಸ್‌ ಉಪನಿರೀಕ್ಷಕ ಸುಗುಮಾರನ್‌ ಅವರು ಸಿಬಂದಿ ಜೊತೆ ಪಂಪ್ ವೆಲ್ ಚೆಕ್‌ಪಾಯಿಂಟ್ ನಲ್ಲಿ ತಪಾಸಣೆಯಲ್ಲಿದ್ದ ವೇಳೆ ರಾತ್ರಿ ಸುಮಾರು 9.45ರ ವೇಳೆಗೆ ಕಂಕನಾಡಿ ಹಳೇ ರಸ್ತೆ ಕಡೆಯಿಂದ ಪಂಪ್‌ವೆಲ್‌ಗೆ ವೇಗವಾಗಿ ಆಟೋ ರಿಕ್ಷಾ ಬರುತ್ತಿರುವುದನ್ನು ಗಮನಿಸಿದ ಪೊಲೀಸ್‌ ಸಿಬ್ಬಂದಿ ರಿಕ್ಷಾವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಈ ವೇಳೆ ಚಾಲಕ ಅಪಾಯಕಾರಿ ರೀತಿಯಲ್ಲಿ ಯದ್ವಾತದ್ವಾ ವಾಹನ ಚಲಾಯಿಸಿ ಪೊಲೀಸರತ್ತ ನುಗ್ಗಿಸಿಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಇಲಾಖಾ ಹೈವೇ ಪಟ್ರೋಲ್‌ ವಾಹನಕ್ಕೆ ಢಿಕ್ಕಿಪಡಿಸುವ ರೀತಿಯಲ್ಲಿ ಚಲಾಯಿಸಿ ಬಿ.ಸಿ. ರೋಡ್‌ ಕಡೆಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಕುರಿತಂತೆ ಮಂಗಳೂರು ಸಂಚಾರಿ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ‌.

- Advertisement -

Latest News

error: Content is protected !!