Thursday, June 4, 2026
Homeತಾಜಾ ಸುದ್ದಿ24 ಗಂಟೆಗಳಲ್ಲಿ 311 ಮಂದಿ ಸಾವು, ಸಾವಿನ ಸಂಖ್ಯೆ 8884ಕ್ಕೆ ಏರಿಕೆ.. !

24 ಗಂಟೆಗಳಲ್ಲಿ 311 ಮಂದಿ ಸಾವು, ಸಾವಿನ ಸಂಖ್ಯೆ 8884ಕ್ಕೆ ಏರಿಕೆ.. !

- Advertisement -
- Advertisement -

ನವದೆಹಲಿ: ದೇಶದಾದ್ಯಂತ ಕೋವಿಡ್ -19 ರೋಗದಿಂದ ಸಾವಿಗೀಡಾದವರ ಸಂಖ್ಯೆ 8884 ಆಗಿದೆ. ಕೇಂದ್ರ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಸಚಿವಾಲಯದ ಮಾಹಿತಿ ಪ್ರಕಾರ 308993 ಮಂದಿಗೆ ಸೋಂಕು ದೃಢಪಟ್ಟಿದ್ದು 154330 ಮಂದಿ ಚೇತರಿಸಿಕೊಂಡಿದ್ದಾರೆ. 145779 ಕ್ರಿಯಾಶೀಲ ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 311 ಮಂದಿ ಸಾವಿಗೀಡಾಗಿದ್ದಾರೆ. ಒಂದೇ ದಿನ 11,929 ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಮಹಾರಾಷ್ಟ್ರದಲ್ಲಿ 49628 ಕ್ರಿಯಾಶೀಲ ಪ್ರಕರಣಗಳಿದ್ದು ಈವರೆಗೆ 3717 ಮಂದಿ ಮೃತಪಟ್ಟಿದ್ದಾರೆ. ಗುಜರಾತಿನಲ್ಲಿ ಸೋಂಕಿತರ ಸಂಖ್ಯೆ 22527 ಆಗಿದ್ದು 1415 ಮಂದಿ ಸಾವಿಗೀಡಾಗಿದ್ದಾರೆ.

ಕೇರಳದಲ್ಲಿ 2322 ಮಂದಿಗೆ ಸೋಂಕು ದೃಢಪಟ್ಟಿದ್ದು ಇಲ್ಲಿಯವರೆಗೆ 19 ಮಂದಿ ಸಾವಿಗೀಡಾಗಿದ್ದಾರೆ. ದೆಹಲಿಯಲ್ಲಿ 22212 ಕ್ರಿಯಾಶೀಲ ಪ್ರಕರಣಗಳಿದ್ದು 36824 ಮಂದಿಗೆ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ 1214 ಮಂದಿ ಸಾವಿಗೀಡಾಗಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 5680 ಕ್ಕೇರಿದ್ದು ಈವರೆಗೆ 80 ಮಂದಿ ಸಾವಿಗೀಡಾಗಿದ್ದಾರೆ. ತಮಿಳುನಾಡಿನಲ್ಲಿ 40698 ಮಂದಿಗೆ ಸೋಂಕು ತಗಲುಲಿದ್ದು ಇಲ್ಲಿಯವರೆಗೆ 367 ಮಂದಿ ಸಾವಿಗೀಡಾಗಿದ್ದಾರೆ.

- Advertisement -

Latest News

error: Content is protected !!